ಕವನಗಳು 

ಮೂರೂ ಕವನಗಳನ್ನು ಬರೆದವರು: ಶ್ರೀಮತಿ ಸುಧಾ ಶ್ರೀನಾಥ್.

1) ಹೆಮ್ಮೆಯ ಕುಡಿ 

ಕಂದಮ್ಮ ಹುಟ್ಟಿದ ಗಳಿಗೆಯಲೀ..

ಆನಂದಭಾಷ್ಪ ತೇಲಿ ಕoಗಳಲಿ,

ಕನಸುಗಳ ಅಂಗಳದಿ ನನಸು ತೇಲುತಲಿ..

ಅವಳು ನಗು — ಧೈರ್ಯದ ಭಾಷೆ,

ಕೈಲಿ ಕಲೆ, ಮನದಿ ಕರುಣೆ,

ಯಶಸ್ಸು ಅವಳ ಅಲಂಕಾರ …

ಸತ್ಯ ಸುಂದರ ತರುಣಿ…

ಮಾತೃ ಮನದ ಮುಡಿಪು, 

ಪಿತೃ ಕನಸಿನ ಹೊಳಪು,

ಮಗಳೆ ನೀನೆ — ನಮ್ಮೆಲ್ಲರ ಹುಮ್ಮಸ್ಸಿನ ಹುರುಪು..

2)ತೀಕ್ಷ್ಣ  ಭಾವ

ಕಣ್ಣ ರೆಪ್ಪೆಗೆ, 

ಕಣ್ಣೀರಿನ ಹನಿಗಳೇ ಭಾರ,

ದುಃಖತಪ್ತ ಮನಕೆ,

ಭಾವಗಳೇ ಆಧಾರ…

ನೋವು ನಿರಾಕಾರ…

ಅದನು ಗೆಲ್ಲುವ ಛಲವೊಂದೇ ಸಾಕಾರ…

3) ಗೆಳತಿ

ಸ್ಪೂರ್ತಿಯ ಸೆಲೆಯೆ !

ಭರವಸೆಯ ಕುಡಿಯೇ 

ನಿನಗಿದು ಸರಿಯೇ ??

 ಹೃದಯದ ಪಾರದರ್ಶಕದಲ್ಲಿ

ಸೆರೆಹಿಡಿದ ಸುಂದರ ಗಳಿಗೆಗಳ

ಮಧುರ ಕ್ಷಣಗಳ ಕಣ್ಣಂಚಿನಲ್ಲಿ ತೇಲಿಸಿ ,

ತುಟಿಯಂಚಿನಲ್ಲಿ ತಿಳಿ ನಗುವ ತರುವೆ

 ಗೆಳತಿ, ನೀನ್ಯಾರು ನಾ ಅರಿಯೆ 

“ನೆನಪು” ಎಂಬ ಮೋಹಕ ಹೆಸರ ನಿನಗೆ ನೀಡುವೆ

ಮನುಜ ಕುಲಕ್ಕೆ ನೀನೊಂದು ವರವೇ????


0 Comments

Leave a Reply

Avatar placeholder

Your email address will not be published. Required fields are marked *