ವ್ಯಕ್ತಿ ಪರಿಚಯ – ಕುಮಾರಿ ದಿಶಾ ಪುರಾಣಿಕ್ 

ನಮ್ಮ ಬಡಾವಡೆಯಲ್ಲಿಯೇ  ಹುಟ್ಟಿಬೆಳೆದು , ಸಂಗೀತದ ನಾದಲೋಕದಲ್ಲಿ  ಪ್ರಜ್ವಲಿತ್ತಿರುವ ಬಹುಮುಖ ಪ್ರತಿಭೆ: ಕುಮಾರಿ ದಿಶಾ ಪುರಾಣಿಕ್ 

ಬೆಂಗಳೂರು: ಶಾಸ್ತ್ರೀಯ  ಮತ್ತು  ಸುಗಮ ಸಂಗೀತ -ಎರಡರಲ್ಲೂ ಸಮಾನ ಹಿಡಿತ ಸಾಧಿಸಿ, ತನ್ನ ಸುಮಧುರ ಗಾಯನದ ಮೂಲಕ ಕಲಾಭಿಮಾನಿಗಳ ಗಮನ ಸೆಳೆಯುತ್ತಿರುವ ಉದಯೋನ್ಮುಖ  ತಾರೆ, ಕುಮಾರಿ ದಿಶಾ ಪುರಾಣಿಕ್ . ಶ್ರೀ ಭಾರ್ಗವ್   ಪುರಾಣಿಕ್  ಮತ್ತು  ಶ್ರೀಮತಿ  ಪದ್ಮಜಾ ಪುರಾಣಿಕ್ ದಂಪತಿಗಳ ಪುತ್ರಿಯಾದ ಈಕೆ, ಆರು ವರ್ಷದ  ಪುಟ್ಟ ವಯಸ್ಸಿನಲ್ಲೇ  ಸಂಗೀತದತ್ತ ಆಕರ್ಶಿತರಾಗಿ , ಇಂದು ನಾಡಿನಾದ್ಯಂತ ಭರವಸೆಯ ಗಾಯಕಿಯಾಗಿ ಮೂಡಿಬಂದಿದ್ದಾರೆ.

ಬಾಲ್ಯದಿಂದಲೇ ಚಿಮ್ಮಿದ  ಪ್ರತಿಭೆ

ಚಿತ್ರ ಶೀರ್ಷಿಕೆ : ಶಾಲಾ ದಿನಗಳಲ್ಲೇ  ವೇದಿಕೆಯ ಮೇಲೆ ಗಾಯನ ಪ್ರದರ್ಶನ  ನೀಡುತಿರುವ ಬಾಲ ಪ್ರತಿಭೆ ದಿಶಾ ಪುರಾಣಿಕ್ .

ಸಂಗೀತವು, ದಿಶಾ ಅವರಿಗೆ ಜನ್ಮಜಾತವಾಗಿ ಬಂದಿರುವ ವರ ಎನ್ನಬಹುದು. ದಿಶಾ ಅವರ ಅಜ್ಜಿ  , ಶ್ರೀಮತಿ  ಮಧುರ ರಾಮಚಂದ್ರ ಪುರಾಣಿಕ್  ಕೂಡ ಸಂಗೀತ ಕ್ಷೇತ್ರದಲ್ಲಿ  ಸಾಧನೆ ಮಾಡಿದ್ದಲ್ಲದೆ, ಆಕಾಶವಾಣಿಯ ಮಾನ್ಯತೆ ಪಡೆದ ಗಾಯಕಿಯಾಗಿದರು. ಹೀಗಾಗಿ , ಇವರ ರಕ್ತದಲೇ ಸಂಗೀತದ ಸುಧೆ ಹರಿಯುತ್ತಿದ್ದು , ಬಾಲ್ಯದಲೇ ಆ ಪ್ರತಿಭೆ ಅನಾವರಣಗೊಂಡಿದೆ.

ದಿಶಾ ಅವರ ಸಂಗೀತ ಯಾನ ಆರಂಭವಾಗಿದ್ದು  ಶಾಲಾ ವೇದಿಕೆಗಳಿಂದ. ವಿದುಷಿ ಶ್ರೀಮತಿ ಗೌರಿ ಕುಲಕರ್ಣಿ   ಅವರ ಮಾರ್ಗದರ್ಶನದಲ್ಲಿ  ಬೆಳೆದ ಇವರು,   ಗಂಧರ್ವ ಮಹಾವಿದ್ಯಾಲಯದ ಮತ್ತು ಕರ್ನಾಟಕ ಬೋರ್ಡ್    ನಡೆಸುವ ಸಂಗೀತ ಜೂನಿಯರ್ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ  (Distinction) ತೇರ್ಗಡೆಯಾಗಿದ್ದಾರೆ. ಪ್ರಸುತ ಸೀನಿಯರ್ ಪರೀಕ್ಷೆಗಾಗಿ , ಹಿಂದೂಸ್ತಾನಿ  ಶಾಸ್ತ್ರೀಯ ಮತ್ತು  ಸುಗಮ ಸಂಗೀತದ ತಾಲೀಮು ನಡೆಸುತ್ತಿದ್ದಾರೆ .

ದಾಸವಾಣಿಯ ದಿವ್ಯ ಪಯಣ ಮತು ಸ್ಟುಡಿಯೋ ರೆಕಾರ್ಡಿಂಗ್ 

ಚಿತ್ರ ಶೀರ್ಷಿಕೆ 

ಉಡುಪಿಯ ಪವಿತ್ರ ಕೃಷ ಮಠ ಮತ್ತು  ವಿವಿಧ ವೇದಿಕೆಗಳಲಿ ದಾಸವಾಣಿ ಸುಧೆ ಹರಿಸುತ್ತಿರುವ ದಿಶಾ ಪುರಾಣಿಕ್  ಮತ್ತು ತಂಡ.

ತಿರುಪತಿ, ಮಂತ್ರಾಲಯ , ಉಡುಪಿಯ ಕೃಷ್ಣ  ಮಠ, ಬೆಂಗಳೂರಿನ ಇಸ್ಕಾನ್  ದೇವಾಲಯ ಸೇರಿದಂತೆ ಹೈದರಾಬಾದ್ ನ  ಕಚೇಗುಡ ಹಾಗೂ ನಾಡಿನ ಪ್ರಮುಖ ಸಾಂಸಕೃತಿಕ ವೇದಿಕೆಗಳಲ್ಲಿ  ದಿಶಾ ಅವರ ದಾಸವಾಣಿ ಕಾರ್ಯಕ್ರಮಗಳು ಸಾಹಿತ್ಯಾಭಿಮಾನಿಗಳ ಮನಸೂರೆಗೊಂಡಿವೆ. ಸಾಮಾಜಿಕ ಜಾಲತಾಣಗಳಲ್ಲೂ  ಇವರ ಗಾಯನಕ್ಕೆ  ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು , ಹಲವಾರು ಪ್ರಶಸ್ತಿಗಳು  ಇವರನ್ನು  ಅರಸಿ ಬಂದಿವೆ.

ಇತ್ತೀಚೆಗೆ ಪ್ರಖ್ಯಾತ  ‘ನಂದಿ ವಾಹಿನಿ’ (Nandi Vahini) ಯೂಟ್ಯೂಬ್  ಚಾನೆಲ್ಗಾಗಿ ದಾಸರ ಪದಗಳ ಹಾಡಿನ ಗುಚ್ಛವನ್ನು ರೆಕಾರ್ಡ್   ಮಾಡುವ ಮೂಲಕ ಜಾಗತಿಕ ಮಟ್ಟದ ಪ್ರೇಕ್ಷಕರನ್ನು ತಲುಪಿದ್ದಾರೆ .

ತಿರುಪತಿ ತಿರುಮಲದಲ್ಲಿ  ‘ಗಾಯನ ಸೇವೆ’

ಚಿತ್ರ ಶೀರ್ಷಿಕೆ 

ತಿರುಪತಿ ತಿರುಮಲ ದೇವಸ್ತಾನದ (TTD) ಸಹಸ್ರ ದೀಪಾಲಂಕಾರ ಸೇವೆಯಲ್ಲಿ  ಗಾಯನ ಸೇವೆ ಸಲ್ಲಿಸುತ್ತಿರುವ  ದಿಶಾ.

ಪ್ರತಿಷ್ಟಿತ  TTD ಆರ್ಟಿಸ್ಟ್ ಪಾನಲ್  ಸದಸ್ಯೆಯಾಗಿ ಆಯ್ಕೆಯಾಗಿರುವ ದಿಶಾ ಅವರು , ತಿರುಮಲದ ಸಹಸ್ರ ದೀಪಾಲಂಕಾರ ಸೇವೆಯಲ್ಲಿ ಹಾಡುವ ಮೂಲಕ ಶ್ರೀ ವೆಂಕಟೇಶ್ವರ ಸ್ವಾಮಿಗೆ ಗಾಯನ ಸೇವೆ ಅರ್ಪಿಸಿದಾರೆ. ಇವರ ಗಾಯನವು SVBC ವಾಹಿನಿಯ ಮೂಲಕ ಲಕ್ಷಾಂತರ ಭಕ್ತರನ್ನು  ತಲುಪಿದೆ.

ಗುರುಗಳ ಆಶೀರ್ವಾದ  ಮತ್ತು  ಆಕಾಶವಾಣಿ ಸಂದರ್ಶನ 

ಚಿತ್ರ ಶೀರ್ಷಿಕೆ : ಶ್ರೀ ಸತ್ಯಾತ್ಮ ತೀರ್ಥ ಗುರುಗಳಿಂದ ಆಶೀರ್ವಾದ ಪಡೆಯುತ್ತಿರುವ ದೃಶ್ಯ 

ಹೈದರಾಬಾದಿನ  ಕಚೇಗುಡದಲಿ ಶ್ರೀ ಉತ್ತರಾದಿ ಮಠದ ಪೀಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಗುರುಗಳಿಂದ ಇವರು ಪಡೆದ ವಿಶೇಷ ಆಶೀರ್ವಾದವು  ಇವರ ಸಾಂಸಕೃತಿಕ ಪಯಣಕ್ಕೆ   ಹೊಸ ಚೈತನ್ಯ ನೀಡಿದೆ.

ಇತ್ತೀಚೆಗೆ ಆಕಾಶವಾಣಿ ಧಾರವಾಡದ ಪ್ರಖ್ಯಾತ  ‘ಯುವವಾಣಿ’ ಕಾರ್ಯಕ್ರಮದಲ್ಲಿ, ಇವರ ವಿಶೇಷ ವಿಶೇಷ ಸಂದರ್ಶನ ಪ್ರಸಾರವಗಿದ್ದು, ಇವರ ಸಾಧನೆಯ ಹಾದಿ ಯುವಜನತೆಗೆ ಸ್ಪೂರ್ತಿಯಾಗಿದೆ.

ನಮ್ಮ ಬಡಾವಣೆಯಲ್ಲಿ 

 

ನಮ್ಮ ಬಡಾವಣೆಯ 2024 ರ ರಾಮೋತ್ಸವದಲ್ಲಿ , ಕುಮಾರಿ ದಿಶಾ ಪುರಾಣಿಕ್  ಹಾಗೂ  ಅವರ ತಾಯಿ ಶ್ರೀಮತಿ ಪದ್ಮಜಾ ಪುರಾಣಿಕ್ ಅವರುಗಳು  ,ಅದ್ಭುತವಾಗಿ ಹಾಡಿ, ಎಲ್ಲರ ಮೆಚ್ಚುಗೆ ಗಳಿಸಿದರು.

ಬಹುಭಾಷಾ ಗಾಯಕಿ ಮತು ಹಿನ್ನೆಲೆ  ಗಾಯನ ಹಾಗೂ ಚಲನಚಿತ್ರ ಗೀತೆ ಹಾಗೂ ಸುಗಮ ಸಂಗೀತ ಕ್ಷೇತ್ರದಲ್ಲಿ ಛಾಪು

ಚಿತ್ರಶೀರ್ಷಿಕೆ : ದಿಶಾ ಪುರಾಣಿಕ್  ಅವರು ಧ್ವನಿ ನೀಡಿರುವ “ನಿನೈವೇ” (Ninaive) ಬಹುಭಾಷಾ ಮ್ಯೂಜಿಕ್ ವಿಡಿಯೋ ಬ್ಯಾನರ್ 

ದಾಸ ಸಾಹಿತ್ಯದ ಜೊತೆಗೆ, ಚಲನಚಿತ್ರ ಗೀತೆ ಹಾಗೂ ಭಾವಗೀತೆಗಳಲ್ಲೂ  ದಿಶಾ ಅವರು ಅಪಾರ ಆಸಕ್ತಿ  ಹೊಂದಿದ್ದಾರೆ. ಖ್ಯಾತ ಗಾಯಕಿ ಶ್ರೀಮತಿ ಕಸ್ತೂರಿ ಶಂಕರ್ ಅವರ ಔತರಿ, ಶ್ರೀಮತಿ ಯಶಸ್ವಿನಿ  ಉಮೇಶ್ ಅವರ ಬಳಿ ಹಿನ್ನೆಲೆ  ಗಾಯನ (Playback Singing) ಕಲಿಯುತಿರುವ ಇವರು, ಈ ಕ್ಷೇತ್ರದಲ್ಲೂ  ಗಣನೀಯ ಸಾಧನೆ ಮಾಡುತ್ತಿದ್ದಾರೆ .

ಪ್ರಮುಖ ಮೈಲಿಗಲುಗಳು:

  •  ಹೆಸರಾಂತ ಕವಿಗಳ ಸಮ್ಮುಖದಲ್ಲಿ ಗಾಯನ: ಸುಗಮ ಸಂಗೀತ ಲೋಕದ ದೈತ್ಯ ಪ್ರತಿಭೆ, ದಿವಂಗತ ಡಾ. ಎಚ್.ಎಸ್. ವೆಂಕಟೇಶಮೂರ್ತಿ  (HSV) ಅವರ ಸಮ್ಮುಖದಲ್ಲಿ ಅವರ ಆಯ್ದ  ಕವನ ಗುಚ್ಚಗಳನ್ನು  ಹಾಡುವ ಮೂಲಕ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ .

  • ಗಾನಗಂಧವ ಡಾ. ಪಿ.ಬಿ. ಶ್ರೀನಿವಾಸ್ ಅವರಿಗೆ ಗೌರವ: ಹಿರಿಯ ಗಾಯಕ ಡಾ. ಪಿ.ಬಿ. ಶ್ರೀನಿವಾಸ್ (PBS) ಅವರ ಪುತ್ರನ ಸಮ್ಮುಖದಲ್ಲಿ, ಪಿ.ಬಿ.ಎಸ್ ಅವರು ಹಾಡಿರುವ ಅಮರ ಚಿತ್ರಗೀತೆಗಳನ್ನು  ಅತ್ಯಂತ ಸುಶ್ರಾವ್ಯವಾಗಿ ಪ್ರಸುತಪಡಿಸಿ, ಅವರ ಕುಟುಂಬದವರಿಂದ ತುಂಬು ಹೃದಯದ ಪ್ರಶಂಸೆ ಪಡೆದಿದ್ದಾರೆ.

  • ಬಹುಭಾಷಾ ಗಾಯಕಿ: ತಮಿಳು ಮತು ಕನ್ನಡ ಭಾಷೆಯ “ನಿನೈವೇ” (Ninaive) ಮ್ಯೂಸಿಕ್ ವಿಡಿಯೋಗೆ  ಧ್ವನಿ ನೀಡುವ ಮೂಲಕ ಹಿನ್ನೆಲೆ  ಗಾಯನ ಕ್ಷೇತ್ರಕ್ಕೆ  ಯಶಸ್ವಿಯಾಗಿ  ಪಾದಾರ್ಪಣೆ ಮಾಡಿದ್ದಾರೆ .

  • ಸ್ಟೇಜ್ ಷೋ ಗಳು: ಅನೇಕ ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳ ಪ್ರತಿಷ್ಟಿತ ಸ್ಟೇಜ್ ಷೋಗಳಲ್ಲಿ 

    ಭಾಗವಹಿಸಿ, ಸೈ ಎನಿಸಿಕೊಂಡಿದಾರೆ.

ಶಿಕ್ಷಣದಲ್ಲೂ  ಅಗ್ರಪಂಕ್ತಿ

ಸಂಗೀತದಷ್ಟೇ  ಗಂಭೀರವಾಗಿ ಓದನ್ನೂ  ಪರಿಗಣಿಸಿರುವ ದಿಶಾ, ಎಲಾ ಬೋರ್ಡ್  ಪರೀಕ್ಷೆಗಲ್ಲಿ    ಶೇ. 94 ಕ್ಕಿಂತ ಅಧಿಕ ಅಂಕ ಗಳಿಸಿ ಸಾಧನೆ ಮಾಡಿದಾರೆ. ಸದ್ಯ ಎಂಕಾಂ (M. Com) ಮತ್ತು  ಸಿ.ಎಸ್ (Company Secretary) ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ .

ಕಲೆ ಮತ್ತು ಶಿಕ್ಷಣದ ಸಮತೋಲನ ಕಾಯ್ದುಕೊಂಡಿರುವ ಕುಮಾರಿ ದಿಶಾ ಪುರಾಣಿಕ್ ಅವರ ಮುಂದಿನ ಹಾದಿ ಇನ್ನಷ್ಟು ಉಜ್ವಲವಾಗಲಿ ಎಂಬುದು ಎಲ್ಲಾ ಕಲಾಪ್ರೇಮಿಗಳ ಹಾರೈಕೆಯಾಗಿದೆ

 <– ಮುಖ ಪುಟಕ್ಕೆ ವಾಪಸ್


0 Comments

Leave a Reply

Avatar placeholder

Your email address will not be published. Required fields are marked *