ಸಂಪಾದಕರ ಬರಹ 

ಏನು ಕಳಿಸಬೇಕೆಂದು ಸುಮ್ಮನೆ ಯೋಚಿಸುತ್ತಾ ಕೂಡಬೇಡಿ.

ಮನಸ್ಸಿದ್ದಲಿ ಮಾರ್ಗ , ಹವ್ಯಾಸವಿದ್ದಲ್ಲಿ  ಹುಮ್ಮಸ್ಸು . ಏನಾದರೂ ನೀವೇ ಮಾಡಿರುವ , ಜನರಿಗೆ ಇಷ್ಠ ಆಗುವುದನ್ನು  ಕಳುಹಿಸಬಹುದು.

 

 

ಮಾರ್ಚ್ ಸಂಚಿಕೆಯ ಮಾಹುಮಾನ ವಿಜೇತರು.

ಏಪ್ರಿಲ್ ಸಂಚಿಕೆಯ ಸ್ಪರ್ಧೆಯ ಉತ್ತರಗಳು 

ಶ್ರೀಮತಿ ರಾಜೇಶ್ವರಿ ನಾಗರಾಜ್ 

  1.  ಬಯೋಗ್ರಾಫಿಕ್ ಆಕಾಶದ ಎತ್ತರಕ್ಕೆ ಏರಿದೆ.
  2. ಮಳೆ ಜಾಸ್ತಿ ಇದ್ರೆ ಹೆಚ್ಚು ಕೊಡೆಗಳನ್ನು ನೀಡಬಲ್ಲೆ
  3. ಇಂಡಿಯಾ ವರ್ಕ್ ಕೊಟ್ಟು ನಿದ್ರೆಗೆ ಜಾರುತ್ತೇನೆ
  4. ಅವರವರ ತೂಕದ ಮೇಲೆ ಅವಲಂಬಿಸಿದೆ
  5. ಗಾಂಧಿ ತತ್ವ ವಿರುದ್ಧ, “ಬೇಗ ಮಲಗಿ   ನಿಧಾನವಾಗಿ ಏಳಿ”.
  6. ಹೆಂಡತಿಯ ಬೈಗುಳ
  7. ಅದು ಒಂದು ಗೂಬೆ
  8. ವಿಮಾನದಲ್ಲಿ ಹಾರುವುದು ಲಂಕೆಗೆ ಹನುಮಂತನಂತ
  9. ಇಂದಿನ ವಯಸ್ಸಿಗೆ ಐದು ಸೇರಿದರೆ ಆ ವಯಸ್ಸಿನಲ್ಲಿ ಇರುತ್ತೇನೆ ಏಜ್ ಪ್ಲಸ್ ಫೈವ್
  10. ಆ!ಯೋಗ್ಯನ?

ಶ್ರೀ ಆನಂದ್ ಎಸ್ ಬಿ 

1) ಸೋ ಮ ವಂಶದ
ಸೋಮಜ್ಜನ ರಿಮಗ,
ಸೋಲೂರಿನ ಹದೇವನ ಮಗ,
ಸೋ ಮಶೇಖರ ಹದೇವ
ಸೋ ಲದೇವನಹಳ್ಳಿ ಹಾಲಕ್ಷ್ಮಿ- ನನ್ನ ತಾಯಿ
ಸೋದರಮಾವನ ಗಳು, ನನ್ನ ಸತಿ ಸೋಹೇಶ್

2) ಸೋ ಲರಿಯದ ಟ್ಟಕ್ಕೆ ಬೆಳೆಸುವುದು

3) ಸೋಲ್ಜರ್ ನಸ್ಥಿತಿ ಜಾರಿಗೆ ತರ್ತೀನಿ

4) ಸೋಜ್ಜಿಗೆ ಕುಡಿದು
ತಂಪಾಗಿರ್ತೀನಿ

5) ಸೋ ಮವಾರ ದ್ಯಾಹ್ನ ಏಳ್ತೀನಿ

6) ಸೋಗು ಹಾಕಿ ನೇಲೇ ಕಾಲ ಕಳೆಯುವುದು

7) ಸೋ ದರ ತ್ಸರ

8) ಸೋ ಮಾರಿಗಳನ್ನು ಟ್ಟ ಹಾಕುವುದು

9) ಸೋ ಲೂರಿನ ನೆ ಮಾತಾಗುವಷ್ಟು ಬೆಳೆಯುವುದು

10) ಸೋ ಷ್ಯಲ್ ನುಷ್ಯ
ಎಂದಿಗೂ ಯೋಗ್ಯನೇ

ಡಾ || ಎ ಎಸ್ ಚಂದ್ರಶೇಖರ ರಾವ್ 

  1. ನನ್ನ ಬಯಾಗ್ರಫಿ ಎಂದರೆ ಜಾಗರಫಿ ಯಲ್ಲಿ ಬರುವ ಭೂಕಂಪ ಪ್ರವಾಹ ಜಲಪಾತ ಅಗ್ನಿ ಪರ್ವತ ಇವೆಲ್ಲ ಕಂಡರೆ ನನಗೆ ತುಂಬಾ ಭಯ
  2. ಸರ್ ಹಿಂದಿನ ಕಂಪನಿಯಲ್ಲಿ ನಾನು ಕೊಡುಗೆ ಸೋಮ ಆಗಿದ್ದೆ ಎಷ್ಟೊಂದು ಜನರಿಗೆ ಕಂಪನಿಯ ಸಾಮಗ್ರಿಗಳನ್ನು ಕಾಣಿಕೆ ಉಡುಗೊರೆಯಾಗಿ ಕೊಟ್ಟು ಕಂಪನಿಯ ಕರುಣ ಎನಿಸಿಕೊಂಡಿದ್ದೆ ಇನ್ನು ಸ್ವಲ್ಪ ದಿನದಲ್ಲಿ ಕರ್ನಾಟಕ ಕರ್ಣ ಬಿರುದು ಬರುತ್ತಿತ್ತು ಅಷ್ಟರಲ್ಲಿ ಕಂಪನಿ ಮುಚ್ಚಿ ಹೋಯಿತು
  3. ಟೀಮ್ ವರ್ಕಾ  ಸರ್, ನಾನು ತುಂಬಾ ಚೆನ್ನಾಗಿ ಟೀ ಮಾಡ್ತೀನಿ, ಎಲ್ಲರಿಗೂ ತುಂಬಾ ಇಷ್ಟ ಎಲ್ಲಾ ನನ್ನ ಬಳಿ ಬರುತ್ತಾರೆ ನನ್ನ ಟೀ  ಕುಡಿತಾರೆ
     ಕಳೆದ ಕೆಲಸ ಸಾರ್
  4. ಎಷ್ಟು ರಶ್  ಇರಲಿ ನಾನು ನುಗ್ಗಿ ಸಿನಿಮಾ ಟಿಕೆಟ್ ರೈಲ್ವೆ ಟಿಕೆಟ್ ತರ್ತೀನಿ ಅಲ್ಲದೆ ನಮ್ಮ ಕೆಲಸಗಾರರಿಗೆ ಒತ್ತಡವೇ ಬರದ ಹಾಗೆ ಮನರಂಜನೆ ಸಂಗೀತ ಸಿನಿಮಾ ಇವೆಲ್ಲ ವ್ಯವಸ್ಥೆ ಮಾಡ್ತೀನಿ ಅಲ್ಲದೆ ನಮ್ಮ ಬೀದಿಯ ಶಾಲಿನಿ ಡಾಕ್ಟರ್ ಎಂತಹ ರಕ್ತದ ಒತ್ತಡ ಇದ್ದರೂ ಮೂರೇ ದಿನದಲ್ಲಿ ಕಂಟ್ರೋಲ್ ಮಾಡ್ತಾರೆ
  5. ಸಾರ್ ಸರ್ ನಾನು ಎಚ್ಚರವಾದಾಗ ಮಾತ್ರ ಬೆಳಗ್ಗೆ ಹೇಳುತ್ತೇನೆ ಇಷ್ಟೊತ್ತು ಅಂತ ಇಲ್ಲ 10 11 12 ಬೆಳಗ್ಗೆ ಆಗಬಹುದು ಎಚ್ಚರವಾದಾಗ ಮಾತ್ರ ಏಳುತ್ತೀನಿ 
  6. ಎಂಥ ಒಳ್ಳೆ ಪ್ರಶ್ನೆ ಕೇಳಿದಿರಿ ಸರ್ ವೈಫಲ್ಯ ಎಂದರೆ ವೈಫ್ ಮಾಡುವ ಪಲ್ಯ ಎಷ್ಟೊಂದು ಚೆನ್ನಾಗಿರುತ್ತೆ ಸರ್ ನೀವು ಒಮ್ಮೆ ನಮ್ಮನೆಗೆ ಬನ್ನಿ ಅದರಲ್ಲೂ ನೀವು ಅಂದರೆ ಮಸಾಲೆ ತಿರುವಿ ಹಾಕಿ ಹುರುಳಿಕಾಯಿ ಮತ್ತು ಕ್ಯಾರೆಟ್ ಪಲ್ಯ ತುಂಬಾ ಚೆನ್ನಾಗಿರುತ್ತೆ ಸರ್
  7. ಗೂಗಲ್ ಅದಾ ಸರ್ ಗೂಬೆಗಳು ಗೂಬೆಗಳು ಬೆಳಗ್ಗೆ ಕಣ್ಣು ಕಾಣಲ್ಲ ಅವು ನೋಡೋಕೆ ಸಿಲ್ಲಿ ತರ ಇದ್ದರೂ ತುಂಬಾ ಬುದ್ಧಿವಂತ ಪ್ರಾಣಿ, ಸರ್. ಇನ್ನೊಂದು ಆಶ್ಚರ್ಯ ಎಂದರೆ ನಮ್ಮ ಸಿರಿದೇವಿ ಮಹಾಲಕ್ಷ್ಮಿ ಗೋಬಿಯನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾಳೆ ಸರ್ ಅಷ್ಟೊಂದು ಶ್ರೀಮಂತಿಕೆ ಇದ್ದರೂ ಇದನ್ನು ಯಾಕೆ ಮುಟ್ಟಿದಳು ಗೊತ್ತಿಲ್ಲ
  8. ನನ್ನ ದೊಡ್ಡ ಶಕ್ತಿ ಅಂದರೆ ಮಾತುಗಾರಿಕೆ ನನ್ನ ಮಾತುಗಳು ಎಷ್ಟೋ ಜನರು ಅರ್ಥ ಮಾಡಿಕೊಳ್ಳುವುದಿಲ್ಲ ನಿಘಂಟಿನಲ್ಲೂ ಇಲ್ಲ ಎಷ್ಟೊಂದು ಸೂರ್ಯ ದರ್ಶನ ಅಂದ್ರೆ ಸಂದರ್ಶನ ಮತ್ತು ಪುತ್ರ ದರ್ಶನ ಅಂದರೆ ಸಂದರ್ಶನ ಅಟೆಂಡ್ ಮಾಡಿದ್ದೇನೆ ಮಾತಿನ ಬಗ್ಗೆ ಗಾದೆ ಮಾಡಿದ್ದೇನೆ ಮಾತಾಡುವ ಅಂತ ಕೆಲಸ ಮಾಡಲ್ಲ ಕೆಲಸಗಾರ ಮಾತಾಡಲ್ಲ ಅಂತ ಮಾತೇ ನನ್ನ ಶಕ್ತಿ ಮಾತೆಯರು ಅಂದರೆ ಮಹಿಳೆಯರು ಮಾತುಗಾರರು
  9. ಸರ್, ಇನ್ನು ಐದು ವರ್ಷ ಏನು 10 ವರ್ಷ ಇಲ್ಲೇ ಇರುತ್ತೇನೆ ಇಲ್ಲಿ ಹವಾ ಚೆನ್ನಾಗಿದೆ ಊಟ ತಿಂಡಿ ಎಲ್ಲಾ ಚೆನ್ನಾಗಿದೆ ಸ್ವರ್ಗ ಅಂತಾರಲ್ಲ ಅಲ್ಲಿ ಬರಿ ವರ್ಣನೆ ಹೇಗಿದೆ ಅಂತ ಬಂದು ಯಾರೂ ಹೇಳಿಲ್ಲ ನಿಮ್ಮ ಕಂಪನಿ ಇರೋವರ್ಗು ಇಲ್ಲೇ ಇರ್ತೀನಿ ವಿದೇಶನು ಬೇಡ ಅಲ್ಲಿ ಹವಾ ಊಟ ತಿಂಡಿ ಚೆನ್ನಾಗಿರಲ್ಲ
  10. ನನ್ನನ್ನು ಯೋಗ್ಯತೆ ಯೋಗದ ವಿಚಾರ ನಮ್ಮ ಗುಡ್ಡದ ಹೆಸರು ಹೇಳಿದ್ದಾರೆ ನನ್ನ ಜಾತಕದಲ್ಲಿ ಎಷ್ಟೊಂದು ಯೋಗಗಳಿವೆಯಂತೆ ಗಜಕೇಸರಿ ಯೋಗ ಚಂದ್ರಮಂಗಳ ಇವಾಗ ಅಲ್ಲದೆ ನಾನು ಯೋಗ ಎಕ್ಸ್ಪರ್ಟ್ ಅನೇಕ ವಿದೇಶಿಯರು ನನ್ನ ಶಿಷ್ಯರು ಮುದ್ದೆ ಸಾರು ತಂದು ಶವಾಸನ ಹಾಕಿದರೆ ಜವಾನು ನಾಚಿಕೊಂಡು ಎದ್ದು ಹೋಗಬಹುದು ಅಷ್ಟು ಚೆನ್ನಾಗಿ ಆಚರಣೆಗಳನ್ನು ಹಾಕುತ್ತೇನೆ
    – ನನಗೆ ತುಂಬಾ ಚೆನ್ನಾಗಿ ಪ್ರಶ್ನೆಗಳನ್ನು ಕೇಳ್ತೀರಾ ನಮ್ಮ ಸಂಸ್ಥೆಗೆ ಬನ್ನಿ ತುಂಬಾ ಜನ ನಮ್ಮೂರು ಪಾಸ್ ಆಗ್ತಾರೆ .ವಂದನೆಗಳು .ಎಷ್ಟೊಂದು ವಂದನೆಗಳು

ಶ್ರೀ ಎಸ್ ವಿಠ್ಠಲ ರಾವ್ 

  1. ನಾನು ಯಾರನ್ನಾದರೂ ಚೆನ್ನಾಗಿ ಬಯ್ಯ ಬಲ್ಲೆ,ಸಾರ್.
  2. ನನ್ನಂತವರ ಒಂದು 5/6 ಜನರನ್ನು ನಿಮ್ಮ ಕಂಪನಿಗೆ ಕರಕೊಂಡು ಬರಬಲ್ಲೆ
  3. ಎಲ್ಲರೂ ನಮ್ಮವರೇ ಆಗಿರುವುದರಿಂದ ಒಬ್ಬರಿಗೊಬ್ಬರು ಮಾತಾಡಿಕೊಂಡು ಸಲೀಸಾಗಿ ಕೆಲಸ ಮಾಡಿ ಕೊಂಡು ಹೋಗ್ತೀವಿ.
  4. ಒತ್ತಡದಲ್ಲಿ ಓವರ್ ಟೈಮ್ ಮಾಡುವ ಮೂಲಕ ನಿಭಾಯಿಸ್ತೀನಿ.
  5. ಬೆಳಗ್ಗೆ ನಾನೇ ಕೋಳಿ ನ ಎಬ್ಭಿಸೋದು.
  6. ನನ್ನ ತೀರ ವ್ಯೆಫಲ್ಯ ಅಂದರೆ ನನ್ನ ಕಿವಿ ಕೇಳಿಸದೇ ಇರುವುದು.
  7. ಗೂಗಲ್ ಅಂದರೆ ಏನು ಬೇಕಾದರೂ ಪಡಿಯಬಹುದು ದುಡ್ಡು ಒಂದು ಬಿಟ್ಟು.
  8. ನನ್ನ ನಿಜವಾದ ಶಕ್ತಿ ಅಂದರೆ,ನನಗೆ ಕೊಟ್ಟ ಕೆಲಸ ಯುಕ್ತಿ ಯಿಂದ ಮಾಡುವುದಕ್ಕೆ ಆಗದಿದ್ದರೆ ಶಕ್ತಿ ಯಿಂದ ಮಾಡುವುದು.
  9. ಇನ್ನು 5 ವರ್ಷದಲ್ಲಿ ನಾ ನೊಬ್ಬ
    ಮುಖ್ಯ ಅಧಿಕಾರಿ.ನಿಮ್ಮತರಹ.
  10. ಯೋಗ್ಯನೇ, ಏಕೆಂದರೆ,ನನ್ನ ಸಹಪಾಠಿಗಳೆಲ್ಲಾ ದಡ್ಡರು.

ಈ ಸ್ಪರ್ಧೆಯಲ್ಲಿ , ಎಲ್ಲರೂ ಹಾಸ್ಯಮಯ  ಉತ್ತರ ಬರೆದು ಕಳಿಸಿದ್ದೀರಿ . ಒಬ್ಬೊಬ್ಬರದೂ ವಿಭಿನ್ನವಾಗಿದೆ. ವಿಶ್ಲೇಷಣೆ ಹೀಗಿದೆ 

  1. ಶ್ರೀಮತಿ ರಾಜೇಶ್ವರಿ ನಾಗರಾಜ್ ಅವರ ಉತ್ತರಗಳು ತೀರಾ ಚಿಕ್ಕದಾಗಿ ಇವೆ . ಹಾಸ್ಯ ಸ್ವಲ್ಪ ಕಡಿಮೆ . 
  2. ಡಾ || ಎ ಎಸ್ ಚಂದ್ರಶೇಖರ ರಾವ್ ಅವರ ಉತ್ತರಗಳು ಕೆಲವು ಹಾಸ್ಯಮಯ, ಉದಾ : ನಾನು ಎಚ್ಚರ ಆದಾಗ ಏಳುತ್ತೀನಿ . ಆದರೆ ಕೆಲವುಕಡೆ  ಪದ ಬೇರೆ ಬಳಸಲಾಗಿದೆ – ಉದಾ : ವೈಪಲ್ಯ ಅನ್ನುವುದಕ್ಕೆ ವೈಫ್ ಮಾಡುವ ಪಲ್ಯ . ಅದೇ ಪದಕ್ಕೆ ಹಾಸ್ಯ ಮಾಡಬೇಕು. 
  3. ಶ್ರೀ ಎಸ್ ವಿಠ್ಠಲ ರಾವ್ ಅವರ ಕೆಲವು ಉತ್ತರಗಳು ಹಾಸ್ಯ ಮಯ, ಉದಾ : ಬೆಳಿಗ್ಗೆ ನಾನೇ ಕೋಳಿನ  ಎಬ್ಬಿಸೋದು . 
  4. ಶ್ರೀ ಎಸ್ ಬಿ ಆನಂದ್ ಅವರ ಸೋದರ ಮತ್ಸರ ಎಂಬ ಒಂದನ್ನು ಬಿಟ್ಟು ಎಲ್ಲವೂ ಹಾಸ್ಯಮಯ ಹಾಗೂ ಕವಿತ್ವ ಸೇರಿ ,ಚೆನ್ನಾಗಿವೆ . 

ಈ ಸ್ಪರ್ಧೆಯಲ್ಲಿ , ಹಾಸ್ಯಮಯ ಜೊತೆಗೆ ಕವಿತ್ವ ಸೇರಿಸಿ ಉತ್ತರ ಬರೆದ ಶ್ರೀ ಎಸ್ ಬಿ ಆನಂದ್ ಅವರಿಗೆ ಬಹುಮಾನ ಲಭಿಸಿದೆ. ಅವರಿಗೆ ಅಭಿನಂದನೆಗಳು 

ಈ ಸಂಚಿಕೆಯಲ್ಲಿ-ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ 

ಬೇಸಿಗೆ ರಜೆ  ಇರುವುದರಿಂದ , ಈ ಸಂಚಿಕೆಯಲ್ಲಿ , ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ ಇರುತ್ತದೆ.

ವಿವರ : A4 ಅಳತೆಯ ಹಾಳೆಯಲ್ಲಿ ನಿಮಗೆ ಇಷ್ಟವಾದ ಚಿತ್ರ ಬರೆದು, ಅದರಲ್ಲಿ ನಿಮ್ಮ ಹೆಸರು, ವಯಸ್ಸು ಬರೆದು ಅದರ ಚಿತ್ರ ತೆಗೆದು  ನನ್ನ ವಾಟ್ಸ್ ಅಪ್ ನಂಬರ್ 8971862089 ಗೆ ಕಳುಹಿಸಿ. ಕೊನೆಯ ದಿನಾಂಕ : 25/05/2025 

ಚರ್ಚಾ ವಿಷಯ 

ಚರ್ಚಾ ವಿಷಯಕ್ಕೆ ಬಹುಮಾನವಿಲ್ಲ .  ಎಲ್ಲರ ಲೇಖನಗಳನ್ನೂ ಪ್ರಕಟಿಸಲಾಗುವುದು 

ವಿಶೇಷ ಸುದ್ದಿ – ನಮ್ಮ ಬಡಾವಣೆಯ 39 ನೇ ರಾಮೋತ್ಸವ 

ನಮ್ಮ ಬಡಾವಣೆಯ 39 ನೆಯ ರಾಮೋತ್ಸವ ತುಂಬಾ ಚೆನ್ನಾಗಿ ನಡೆಯಿತು . 

ಬೆಳಗಿನ ಸಂಗೀತ ಕಾರ್ಯಕ್ರಮ 

ಶ್ರೀಮತಿ ಶ್ವೇತಾ ಪ್ರಭು ಅವರು ಖ್ಯಾತ ಹಿನ್ನೆಲೆ ಗಾಯಕಿ ಹಾಗೂ   ಸರಿಗಮಪ ಜೂರಿ ಮೆಂಬರ್ ಆಗಿದ್ದಾರೆ. ಇವರು ಹಾಗೂ ಇವರ ಸಹೋದರ, ಅದ್ಭುತವಾಗಿ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪಕ್ಕ ವಾದ್ಯದವರು ಸುಂದರವಾಗಿ ಸಾಥ್ ನೀಡಿದರು

ನಮ್ಮ ಸಂಘದ ಸದಸ್ಯೆ ,ಡಾ || ಕೆ ವೀಣಾ ಅವರು ವಂದನಾರ್ಪಣೆ ಕಾರ್ಯಕ್ರಮವನ್ನು ಅದ್ಭುತವಾಗಿ ನಡೆಸಿಕೊಟ್ಟರು.

ಕಲಾವಿಧರಿಗೆ  ಹಾಗೂ ಪಕ್ಕವಾದ್ಯದವರಿಗೆ  ನಮ್ಮ ಬಡಾವಣೆಯ ಪರವಾಗಿ ಸಂಘ ದ ವತಿಯಿಂದ ಕಿರು ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು 

ಸನ್ಮಾನ ಕಾರ್ಯಕ್ರಮಗಳು 

ನಮ್ಮ ಬಡಾವಣೆಯ ನಿವಾಸಿ, ಡಾ|| ಎ.ಸಿ. ಶ್ಯಾಮ್, MBBS, MD, FCGP, FCCP, FIAMS, ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಬೆಂಗಳೂರಿನ ಸಮುದಾಯ ವೈದ್ಯಶಾಸ್ತ್ರದ( ಕಮ್ಯುನಿಟಿ ಮೆಡಿಸಿನ್ ) ಪ್ರಾಧ್ಯಾಪಕರಾಗಿದ್ದಾರೆ.ಇವರು, ನಮ್ಮ ಬಡಾವಣೆಯ ಖ್ಯಾತ ಹೃದ್ರೋಗ ತಜ್ಞ ಡಾ|| ಎ ಎಸ್ ಚಂದ್ರಶೇಖರ ರಾವ್ ಅವರ ಪುತ್ರ . ಡಾ|| ಎ.ಸಿ. ಶ್ಯಾಮ್ ಅವರು, ಡಾ. ಎಂಜಿಆರ್ ವೈದ್ಯಕೀಯ ವಿಶ್ವವಿದ್ಯಾಲಯ, ತಮಿಳುನಾಡಿನಿಂದ ಡಯಾಬಿಟೀಸ್ ಕುರಿತಂತೆ ಅವರ ಸಂಶೋಧನೆ ಮತ್ತು ಪ್ರಬಂಧಕ್ಕಾಗಿ *PhD* ಪದವಿಯನ್ನು ಪಡೆದಿದ್ದಾರೆ. ಇದು ಅವರ ಶೈಕ್ಷಣಿಕ ಮತ್ತು ವೃತ್ತಿಪರ ಜೀವನದಲ್ಲಿ ಒಂದು ಮಹತ್ವದ ಮೈಲಿಗಲ್ಲನ್ನು ಗುರುತಿಸಲಾಗುತ್ತದೆ .  ಈ ಸಂದರ್ಭದಲ್ಲಿ ಅವರಿಗೆ ನಮ್ಮ ಬಡಾವಣೆಯ ಸಂಘದ ಕಾರ್ಯದರ್ಶಿ ಶ್ರೀ ಶ್ರೀನಿವಾಸ ಶೆಟ್ಟಿ ಅವರು  ಕಿರು ಕಾಣಿಕೆ ನೀಡಿ ಸನ್ಮಾನ ಮಾದಿದರು  . 

ನಂತರ , ನಮ್ಮ ರಾಮೋತ್ಸವಕ್ಕೆ 5000 ರೂ  ಧನ ಸಹಾಯ ಮಾಡಿದ ನಮ್ಮ ಬಡಾವಣೆಯ ಸಂಘದ ಕಾರ್ಯದರ್ಶಿ ಶ್ರೀ ಶ್ರೀನಿವಾಸ ಶೆಟ್ಟಿ ಅವರಿಗೆ , ಡಾ|| ಎ ಎಸ್ ಚಂದ್ರಶೇಖರ ರಾವ್ ಅವರು ನಮ್ಮ ಸಂಘದ ಪರವಾಗಿ ಕಿರು ಕಾಣಿಕೆಯನ್ನು ಕೊಟ್ಟು ಸನ್ಮಾನ ಮಾಡಿದರು .

ಕಳೆದ ವರ್ಷದ ಎಸ್ ಎಸ್ ಎಲ್ ಸಿ ಮತ್ತು ಪಿ ಯು  ಸಿ  ಪರೀಕ್ಷೆಗಳಲ್ಲಿ  ಅತಿ ಹೆಚ್ಚು ಅಂಕ ಗಳಿಸಿದ  ನಮ್ಮ ಬಡಾವಣೆಯ ಮಕ್ಕಳಿಗೆ, ನಮ್ಮ ಸಂಘದ ವತಿಯಿಂದ  ಪ್ರತಿಭಾ  ಪುರಸ್ಕಾರ ಮಾಡಲಾಯಿತು .

ಮಕ್ಕಳಿಂದ ವೇಷ ಭೂಷಣ ಕಾರ್ಯಕ್ರಮ, ಭರತ ನಾಟ್ಯ ಮುಂತಾದವು ನಡೆದವು 

ಬಡಾವಣೆಯ ಮಕ್ಕಳಿಂದ ನಾಟಕ , “ಧರ್ಮನಿಷ್ಠ ಶ್ರೀ ರಾಮ”  ನಡೆಯಿತು . ರಚನೆ: ಡಾ|| ಎ ಎಸ್ ಚಂದ್ರಶೇಖರ ರಾವ್ . ನಿರ್ದೇಶನ : ಶ್ರೀಮತಿ ಮೀರಾ ಜಯರಾಂ . ಆ ನಾಟಕದ ವಿಡಿಯೋ ಲಿಂಕ್ ಈ ಕೆಳಗೆ ಇದೆ. 

ಡಾ || ಎ ಎಸ್ ಚಂದ್ರಶೇಕರ ರಾವ್ ಅವರು ನಾಟಕ ಮಾಡಿದ ಎಲ್ಲಾ ಮಕ್ಕಳಿಗೂ ಹಾಗೂ ನಿರ್ದೇಶನ  ಮಾಡಿದ ಶ್ರೀಮತಿ ಮೀರಾ ಜಯರಾಂ ಅವರಿಗೂ ಕಿರುಕಾಣಿಕೆಯನ್ನು ಕೊಟ್ಟು ಸನ್ಮಾನಿಸಿದರು.

ಶ್ರೀ ಶಶಿಧರ್ ಕೋಟೆ ಅವರು ಮುಖ್ಯ ಅತಿಥಿಯಾಗಿ ಬಂದಿದ್ದರು . ಅವರು ಕೆಲವು ಹಾಡು ಹಾಡಿದರು. ಮಕ್ಕಳ ಒಡನೆ, ಹಾಸ್ಯವಾಗಿ ಮಾತನಾಡಿದರು . ನಂತರ ಬಹಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು .

ನಂತರ ಡಾ || ಎ ಎಸ್ ಚಂದ್ರಶೇಖರ ರಾವ್ ಅವರು ಶ್ರೀ ಶಶಿಧರ್ ಕೋಟೆ ಅವರಿಗೆ ಪೇಟ ತೊಡಿಸಿ , ಶಾಲು ಹೊದಿಸಿ ಸನ್ಮಾನ ಮಾಡಿದರು . 

ನಂತರ ಶ್ರೀಮತಿ ಮಾಲತಿ ವೆಂಕಟೇಶ್ ಅವರು ” ಕಿತ್ತೂರು ರಾಣಿ ಚೆನ್ನಮ್ಮ ” ನ ಒಂದು ಏಕಾಭಿನಯ ಬಹಳ ಸೊಗಸಾಗಿ ಮಾಡಿದರು. ( ಚಿತ್ರ  ಮುಂದಿನ ಸಂಚಿಕೆಯಲ್ಲಿ)

ನಂತರ ಡಾ || ಎ ಎಸ್ ಚಂದ್ರಶೇಖರ ರಾವ್ ಅವರು ರಾಮಾಯಣದ ಒಂದು ಪ್ರಸಂಗವನ್ನು ಹೇಳಿದರು . ಕೆಳಗಿನ ಲಿಂಕ್ ಒತ್ತಿದ ನಂತರ ವಿಡಿಯೋ ನೋಡಬಹುದು 

ನಂತರ, ಶ್ರೀರಾಮ ದೇವರಿಗೆ ಮಂಗಳಾರತಿ ನಡೆಯಿತು. ಜನರಿಗೆ ಪ್ರಸಾದವಿನಿಯೋಗ ಮಾಡಿದನಂತರ ಕಾರ್ಯಕ್ರಮ ಕೊನೆಗೊಂಡಿತು.

…….

ಮುದ್ದುಮಕ್ಕಳ ಮುಗ್ಧ ಮನ – ಭಾಗ 10.

ಮಾಲಿನಿ ಮನೆ ಪಕ್ಕದಲ್ಲಿದ್ದ ಕಾಲಿ ಸೈಟಿನಲ್ಲಿ ಒಂದು ಪುಟ್ಟ ತೋಟವನ್ನೇ ನಿರ್ಮಿಸಿದ್ದಳು. ಗಿಡಗಳಿಗೆ ದಿನ ನೀರು ಹಾಕುವುದು ಅವಳ ಪತಿ ರಾಮನ ಕೆಲಸ.  ಮಾಲಿನಿ ಅಡುಗೆ ಮನೆಯಿಂದಲೇ ಕೂಗಿ “ರೀ ಗಿಡಗಳಿಗೆ ನೀರು ಹಾಕಿ” ಎನ್ನುತ್ತಿದ್ದಳು. ಒಂದು ದಿನ ಮಳೆ ಬರುತ್ತಿತ್ತು .ಎಂದಿನಂತೆ ಅಭ್ಯಾಸ ಬಲದಿಂದ ಮಾಲಿನಿ “ರೀ ಗಿಡಗಳಿಗೆ ನೀರು ಹಾಕಿ” ಅಂದಳು. ರಾಮ ಹೇಳಿದ “ಅಲ್ಲ ಮಳೆ ಬರುತ್ತಿದೆಯಲ್ಲ” ಆಗ , ಮೀತು ( ನನ್ನ ಮೊಮ್ಮಗಳು ) ಹೇಳಿದಳು” ಅಪ್ಪ ಮಳೆ ಬಂದರೆ,ಅಷ್ಟು  ಗೊತ್ತಾಗಲ್ವಾ?  ಅಲ್ಲೇ ಮೂಲಿಯಲ್ಲಿ ಇರುವ ಕೊಡೆ ಹಿಡಿದುಕೊಂಡು ಹೋಗಿ ನೀರು ಹಾಕು ” ಎಂದಳು . ಅಲ್ಲೇ ಇದ್ದ ನಾವೆಲ್ಲ ಅವಳ ಮುಗ್ದತೆಗೆ ನಕ್ಕೆವು.

ಪದರಂಗ 

ಕಳೆದ ಸಲದ ಉತ್ತರಗಳು 

ಸರಿಯಾದ ಉತ್ತರ ಕಳುಹಿಸಿದವರು : ಶ್ರೀಮತಿ ಎ  ಸುಬ್ಬಲಕ್ಷ್ಮಿ  ಮತ್ತು ಶ್ರೀಮತಿ ರಾಜೇಶ್ವರಿ ನಾಗರಾಜ್. ಅವರಿಬ್ಬರಿಗೂ ಅಭಿನಂದನೆಗಳು 

ಈ ಸಂಚಿಕೆಯ ಪದಬಂಧ 

ಎಲ್ಲಾ ಸ್ಪರ್ಧೆ, ಚರ್ಚೆಗಳಿಗೂ ಉತ್ತರ ಕಳುಹಿಸಲು ಕೊನೆಯ ದಿನಾಂಕ 25/05/2025 

ಲೇಖನಗಳು  

1. ಶ್ರೀ ರಾಮ ನಾಮ 

ಡಾ || ಎ ಎಸ್ ಚಂದ್ರಶೇಖರ ರಾವ್ 

ಭಗವನ್ನಾಮ ಭಗವಂತನಿಗಿಂತ ಪ್ರಭಾವಶಾಲಿ ಮತ್ತು ಶಕ್ತಿಶಾಲಿ ಎಂದು ಅನೇಕ ಭಕ್ತರು ನಂಬುತ್ತಾರೆ. ಅದರಲ್ಲೂ ಶ್ರೀರಾಮನಾಮ ತುಂಬ ಶ್ರೇಷ್ಠವಾದುದು. ದಾಸರು ಹೇಳಿದಂತೆ ನೀನ್ಯಾಕೋ ನಿನ್ನ ಹಂಗ್ಯಾಕೊ ನಿನ್ನ ನಾಮದ ಬಲವೊಂದಿದ್ದರೆ ಸಾಕು. ಇದು ಭಗವಂತನ ನಾಮದ ಶಕ್ತಿ.

ಪರಮೇಶ್ವರನು ಸದಾ ಧ್ಯಾನ ಮಗ್ನನಾಗಿ ತಪಸ್ಸು ಮಾಡುತ್ತಿರುತ್ತಾನೆ. ಆತ ಯಾರನ್ನು ಕುರಿತು ಧ್ಯಾನ ಮಾಡುತ್ತಾನೆ? ಎಂಬ ಪ್ರಶ್ನೆಗೆ ಪಂಡಿತರೊಬ್ಬರು ಹೇಳಿದ್ದು – ಪರಮೇಶ್ವರನು ಶ್ರೀರಾಮನನ್ನು ಕುರಿತು ಧ್ಯಾನ ಮಾಡುತ್ತಾನೆ ಅಂತ, ಶ್ರೀರಾಮ ಶಿವ ಎಲ್ಲ ಒಂದೇ ಅಲ್ಲವೆ. ಆದರೂ ರಾಮನಾಮಕ್ಕೆ ಅಷ್ಟೊಂದು ಶಕ್ತಿ ಇದೆ ಎನ್ನುತ್ತಾರೆ. ಒಂದು ಸಾರಿ ಪಾರ್ವತಿಯು ಪರಮೇಶ್ವರನನ್ನು ಕುರಿತು ಕೇಳುತ್ತಾಳೆ “ಯಾರ ನಾಮವನ್ನು ಜಪಿಸಿದರೆ ಸಕಲ ಇಷ್ಟಾರ್ಥ ಸಿದ್ಧಿಸುವುದು ಮತ್ತು ಮೋಕ್ಷಕ್ಕೆ ಸಹಾಯವಾಗುತ್ತೆ”. ಅದಕ್ಕೆ ಪರಮೇಶ್ವರನು ಉತ್ತರಿಸುತ್ತಾನೆ “ಶ್ರೀ ವಿಷ್ಣು ಸಹಸ್ರನಾಮ ಜಪಿಸಿದರೆ ಈ ಫಲ ಸಿಗುತ್ತೆ” ಆದರೆ ಪಾರ್ವತಿಗೆ ಇದರಿಂದ ಪೂರ್ತಿ ಸಮಾಧಾನವಾಗುವುದಿಲ್ಲ. ಅದಕ್ಕೆ ಆಕೆ ಕೇಳುತ್ತಾಳೆ “ಒಂದು ಸಾವಿರ ಜಪ ಮಾಡಲು ತುಂಬ ಸಮಯ ಬೇಕಾಗುತ್ತೆ. ತುಂಬ ಸುಲಭವಾದ ಮಾರ್ಗ ತಿಳಿಸಿ”. ಇದಕ್ಕೆ ಪರಮೇಶ್ವರ ಉತ್ತರಿಸುತ್ತಾನೆ “ಶ್ರೀರಾಮನ ಜಪ ಮೂರು ಬಾರಿ ರಾಮ, ರಾಮ, ರಾಮ ಎಂದರೆ ಸಾಕು. ವಿಷ್ಣು ಸಹಸ್ರನಾಮ ಜಪಿಸುವುದರ ಫಲ ದೊರಕುತ್ತದೆ” ಹೀಗಿದೆ ಶ್ರೀರಾಮನಾಮದ ಶಕ್ತಿ, ಪ್ರಭಾವ.

ಪಂಡಿತರು ‘ರಾಮ’ ಎಂಬ ಪದವನ್ನು ಮೂರು ಬಗೆಯಾಗಿ ವಿಶ್ಲೇಷಿಸುತ್ತಾರೆ. ‘ರ’ ಅಕ್ಷರ ಯ, ರ, ಲ, ವ ಗಳಲ್ಲಿ ಎರಡನೆಯದು. ‘ಮ’ ಅಕ್ಷರ ಪ, ಫ, ಬ, ಭ, ಮ’ ದ ಐದನೆಯದು. ಆದ್ದರಿಂದ ‘ರಾಮ’ ಎಂದರೆ ೨x೫=೧೦ ಮತ್ತು ಮೂರು ಬಾರಿ ರಾಮ ಎಂದರೆ ೧೦x೧೦x೧೦=೧೦೦೦. ಈ ಸಾವಿರವೇ ವಿಷ್ಣು ಸಹಸ್ರನಾಮದ ಸಂಖ್ಯೆ, ಆದ್ದರಿಂದ ಮೂರು ಬಾರಿ ನಿಷ್ಠೆಯಿಂದ ‘ರಾಮ’ ಎಂದರೆ ವಿಷ್ಣುಸಹಸ್ರನಾಮದ ಫಲ ದೊರಕುತ್ತೆ. ಎರಡನೆ ಬಗೆ ವಿಶ್ಲೇಷಣೆ ಎಂದರೆ ‘ರ’ ಶಬ್ದ ಗಂಟಲಿನಿಂದ (ಧ್ವನಿಪೆಟ್ಟಿಗೆಯಿಂದ- Vocal chords) ಬರುತ್ತೆ. ‘ಮ’ ತುಟಿಯಿಂದ ಬರುತ್ತೆ. ಇದು.
ಓಂಕಾರಕ್ಕೆ ಸಮ ಎನ್ನುತ್ತಾರೆ. ಮೂರನೆ ವಿಶ್ಲೇಷಣೆ. ‘ಓಂ ನಮೋ ನಾರಾಯಣ, -ಓಂ ನಮಶಿವಾಯ’ ಎನ್ನುವ ಬೀಜಮಂತ್ರಗಳಲ್ಲಿ ‘ರಾ’ ಮತ್ತು ‘ಮ’ ಅಕ್ಷರಗಳನ್ನು ತೆಗೆದರೆ ಆ ಬೀಜಮಂತ್ರಗಳ ಶಕ್ತಿ ಇಲ್ಲದಂತಾಗುತ್ತದೆ. ಇದು ‘ರಾಮ’ ಅಕ್ಷರಗಳ ಪ್ರಾಮುಖ್ಯತೆ ತೋರಿಸುತ್ತದೆ.

ಶ್ರೀರಾಮನಾಮದ ಶಕ್ತಿಯನ್ನು ಪ್ರತಿಪಾದಿಸುವ ಅನೇಕ ದಂತಕತೆಗಳು ಇದೆ. ಇವೆಲ್ಲ ಮೂಲ ರಾಮಾಯಣದಲ್ಲಿ ಇಲ್ಲ ಎಂದು ಹೇಳುತ್ತಾರೆ. ಆದರೆ ಇವುಗಳಲ್ಲಿ ಕೆಲವು ಜನಪ್ರಿಯವಾಗಿವೆ. ಪತ್ರಿಕೆಯೊಂದರಲ್ಲಿ ಪ್ರಕಟವಾದ ಕತೆಯೊಂದು ಹೀಗಿದೆ. ಶ್ರೀರಾಮ ಲಂಕೆಯ ಮೇಲೆ ಯುದ್ಧಕ್ಕೆ ಹೋಗಲು ಸೇತುವೆ ನಿರ್ಮಿಸಲು ಕಪಿಗಳಿಗೆ ಹೇಳಿದ. ಅವರಲ್ಲಿ ‘ನಳ’ ಎಂಬ ಕಪಿ ಕಲ್ಲುಬಂಡೆಗಳ ಮೇಲೆ ಶ್ರೀರಾಮ ಎಂದು ಬರೆದು ಸಮುದ್ರಕ್ಕೆ ಹಾಕಿದರೆ ಆ ಬಂಡೆಗಳು ಮುಳುಗದೆ ತೇಲುತ್ತಿದ್ದುವಂತೆ. ಇದರಿಂದ ಸೇತುವೆ ನಿರ್ಮಿಸಲು ಸುಲಭವಾಯಿತಂತೆ. ಅಲ್ಲಿಗೆ ಬಂದ ರಾವಣನ ಗೂಢಚಾರರು ಈ ‘ಅಚ್ಚರಿ’ಯನ್ನು ನೋಡಿ ಲಂಕೆಗೆ ಹೋಗಿ ರಾವಣನಿಗೆ ಹೇಳಿದರಂತೆ. ಮಹಾಪ್ರಭು, ರಾಮನಾಮ ಬರೆದ ಬಂಡೆ ತೇಲುತ್ತೆ. ನೀವು ರಾಮನಿಗಿಂತ ಶಕ್ತಿವಂತರು. ನಿಮ್ಮ ಹೆಸರು ಬರೆದು ಸಮುದ್ರಕ್ಕೆ ಬಿಡಿ. ಅವು ತೇಲುತ್ತಾ ಎಂದು ನೋಡಬೇಕು. ಅವರೆಲ್ಲರ ಒತ್ತಾಯದ ಮೇಲೆ ರಾವಣ ಒಪ್ಪಿಕೊಂಡು ತನ್ನ ಹೆಸರು ಬಂಡೆಯ ಮೇಲೆ ಬರೆದು ಸಮುದ್ರದ ಬಳಿ ಬಂದ. ಆತನಿಗೆ ಅಂಜಿಕೆ. ಬಂಡೆ ಮುಳುಗಿದರೆ ತನಗೆ ಅಪಮಾನ. ಏನು ಮಾಡಲಿ ಎಂದು ತುಂಬಾ ಯೋಚನೆ ಮಾಡಿ ನಂತರ ಒಂದು ನಿಮಿಷ ಪ್ರಾರ್ಥನೆ ಮಾಡಿ ಬಂಡೆಯನ್ನು ಸಮುದ್ರಕ್ಕೆ ಬಿಟ್ಟ. ಬಂಡೆ ತೇಲಿತು! ಎಲ್ಲರೂ ಹರ್ಷೋದ್ಗಾರ ಮಾಡಿದರು. ಆದರೆ ರಾವಣ ಏನು ಪ್ರಾರ್ಥನೆ ಮಾಡಿದ ಗೊತ್ತೆ? “ಶ್ರೀರಾಮ. ಇದು ನನ್ನ ಸತ್ವಪರೀಕ್ಷೆ. ಈ ಬಂಡೆಯನ್ನು ತೇಲಿಸು ಎಂದು, ರಾಮ ರಾಮ ರಾಮ ಎಂದು ಪ್ರಾರ್ಥಿಸಿದನಂತೆ!” ಹೀಗಿದೆ ರಾಮನಾಮದ ಮಹಿಮೆ.

ಇನ್ನೊಂದು ವಿಶೇಷತೆ ರಾಮನಾಮಕ್ಕಿದೆ. ಅತ್ಯಂತ ಸರಳ ಮತ್ತು ಸುಲಭವಾದ ಶಬ್ದ-ಪದ ಮತ್ತು ಉಚ್ಛರಿಸಲು ಆಪ್ಯಾಯಮಾನ.

 

 

2.ಬೇಸಿಗೆಯ ಧಾರ್ಮಿಕ ಉತ್ಸವಗಳು

-ಬೆಂಗಳೂರು ಸುತ್ತಮುತ್ತ ಜಾತ್ರೆಗಳ ಸಂಸ್ಕೃತಿಯ ಮಧುರ ಕಥನ –

ಶ್ರೀ ಎಸ್ ಸುರೇಶ್ 

“ಜಾತ್ರೆ ಅಂದರೆ ಶ್ರದ್ಧೆಗೂ ಸಂಭ್ರಮಕ್ಕೂ ಸೇತುವೆ” ಏಪ್ರಿಲ್ ಮತ್ತು ಮೇ ತಿಂಗಳುಗಳು ಕೃಷಿಕರ ವಿಶ್ರಾಂತಿಯ ಕಾಲವಾಗಿದ್ದು, ಕರ್ನಾಟಕದ ಹೃದಯಭಾಗವಾದ ಬೆಂಗಳೂರು ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಜಾತ್ರೆಗಳ ಮೆರವಣಿಗೆ ಇವು. ಇವು ಕೇವಲ ದೇವರ ಆರಾಧನೆಗೆ ಸೀಮಿತವಲ್ಲದೆ, ನಮ್ಮ ನಾಡಿನ ನೈಸರ್ಗಿಕ ಚಕ್ರ, ಸಮುದಾಯಗಳ ಸಹಜ ಹಿತಚಿಂತನೆ, ಭಕ್ತಿಯ ಪರಾಕಾಷ್ಠೆ ಮತ್ತು ಸಂಸ್ಕೃತಿಯ ವೈಭವವನ್ನು ಮೆರೆಯುವ ಅದ್ಭುತ ವೇದಿಕೆಗಳಾಗಿವೆ.

“ಋತುಚಕ್ರದೊಂದಿಗೆ ಸಂಸ್ಕೃತಿಯ ಸಮನ್ವಯ – ಜೀವಂತ ಪರಂಪರೆ” ಈ ಕಾಲಮಾನವು ವೈದಿಕ ಕ್ಯಾಲೆಂಡರ್‌ನ ಚೈತ್ರ ಮತ್ತು ವೈಶಾಖ ಮಾಸಗಳಿಗೂ ತಕ್ಕದು. ರಾಮನವಮಿ, ನರಸಿಂಹ ಜಯಂತಿ ಮುಂತಾದ ಪವಿತ್ರ ದಿನಗಳು ಈ ಸಂದರ್ಭದಲ್ಲಿ ಬರುತ್ತವೆ. ಬೇಸಿಗೆಯ ಉರಿ ತಪ್ತತೆಯಿಂದ ಮನಸ್ಸು ಶಾಂತವಾಗಿಸಲು ಹಾಗೂ ದೇಹ ಆರೋಗ್ಯವಂತವಾಗಿರಿಸಲು, ಪುಷ್ಪಾರ್ಚನೆ, ಸಾಂದಳ ಹಚ್ಚುವುದು, ಪಾನಕ ಸೇವನೆ ಮೊದಲಾದ ಆಚರಣೆಗಳು ಆಯುರ್ವೇದದ ದೃಷ್ಟಿಯಿಂದ ಪೌಷ್ಟಿಕತೆಯಿಂದ ಕೂಡಿವೆ.

“ಜಾತ್ರೆಗಳಲ್ಲಿ ದೇವರ ದರ್ಶನವಷ್ಟೆ ಅಲ್ಲ – ಸಂಸ್ಕೃತಿಯ ಸ್ಮರಣೆ” ಬೆಂಗಳೂರು ನಗರ ಹಾಗೂ ಸುತ್ತಮುತ್ತನ ಪ್ರದೇಶಗಳಲ್ಲಿ ಹಲವಾರು ಪ್ರಸಿದ್ಧ ಜಾತ್ರೆಗಳು ನಿತ್ಯ ನಡೆಯುತ್ತಿರುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳು:

  • ಬೆಂಗಳೂರು ಕರಗ – ನಾಡಿನ ಐತಿಹಾಸಿಕ ದೇವ ಸೇವೆಯ ವೈಭವ.
  • ಅತ್ತಿಗುಪ್ಪೆ ಲಕ್ಷ್ಮೀನರಸಿಂಹ ಜಾತ್ರೆ – ಭಕ್ತರ ಹೃದಯ ಗೆದ್ದಿರುವ ಉತ್ಸವ.
  • ಬನ್ನೇರುಘಟ್ಟ ಚಂಪಕಧಾಮ ಸ್ವಾಮಿ ಜಾತ್ರೆ– ಹಸಿರಿನ ನಡುವೆ ಹರಿಯುವ ಭಕ್ತಿಯ ನದಿ.
  • ಚಿಕ್ಕ ತಿರುಪತಿ ವೆಂಕಟರಮಣಸ್ವಾಮಿ ಜಾತ್ರೆ- ತಿರುಪತಿಯ ಭಾವನೆಗೆ ಸಮಾನವಾದ ಅನುಭವ.
  • ಕೆಂಗೇರಿ ಕರುಮಾರಿ ಅಮ್ಮ ಜಾತ್ರೆ – ಜನಮಾತೆಯ ಆರಾಧನೆಯ ವೈಭವ.
  • ಹೆಸರಘಟ್ಟ ನಾಗರಾಜ, ಗಂಗಮ್ಮ, ಮಾರಮ್ಮ ಉತ್ಸವಗಳು – ಹಳ್ಳಿಗಳ ಧಾರ್ಮಿಕ ಜೀವಾಳ.
  • ಮಲ್ಲೇಶ್ವರಂ ನರ್ಸಿಂಹಸ್ವಾಮಿ ಜಾತ್ರೆ – ನಗರದ ನಡುಕಟ್ಟೆಯಲ್ಲಿಯ ಭಕ್ತಿ ಸ್ಪಂದನೆ.
  • ದೊಡ್ದಬಳ್ಳಾಪುರ ವೆಂಕಟೇಶ್ವರ ಸ್ವಾಮಿ ಜಾತ್ರೆ – ನಾಡು ಮರೆಯದ ವೈಭವ.
  • ದೇವನಹಳ್ಳಿ ರಾಮಸ್ವಾಮಿ ಉತ್ಸವ – ಶಾಸ್ತ್ರೀಯ ಧ್ವನಿಗಳ ಪಥದಲ್ಲಿ.
  • ಅರವನಹಳ್ಳಿ ಗಂಗಮ್ಮ ಜಾತ್ರೆ – ಕಾಡು ಮತ್ತು ನದಿಯ ಸಂಯೋಗದಲ್ಲಿ.
  • ನಂದಿ ಬೆಟ್ಟ ದೇವರ ಜಾತ್ರೆ – ಪವಿತ್ರತೆಯ ಪರ್ವತದ ಹೆಜ್ಜೆಗಳು.

“ಅನ್ನದಾನದಿಂದ ಆತ್ಮತೃಪ್ತಿ – ಪಾನಕದಿಂದ ಶರೀರ ತೃಪ್ತಿ” ಪ್ರತಿ ಜಾತ್ರೆಯಲ್ಲಿಯೂ ಕೆಲ ಸಾಮಾನ್ಯ ವೈಶಿಷ್ಟ್ಯಗಳು ಕಂಡುಬರುತ್ತವೆ:

  • ಪಾನಕ ಸಮರ್ಪಣೆ – ಬೆಲ್ಲ, ನಿಂಬೆಹಣ್ಣು ಹಾಗೂ ತಮಾಲಪತ್ರದಿಂದ ತಯಾರಿಸಲಾದ ತಂಪುಪಾನೀಯ.
  • ಕೋಸಂಬರಿ – ಹುರಿದ ಕಡಲೆಬೇಳೆಯಿಂದ ತಯಾರಿಸಿದ ಪೌಷ್ಟಿಕ ಪ್ರಸಾದ.
  • ಬೇಳದ ಹಣ್ಣಿನ ನೀರು – ತಂಪು ನೀಡುವ ಪಾನೀಯ.
  • ಅನ್ನದಾನ – ಎಲ್ಲರಿಗೂ ಸಮಾನವಾಗಿ ಶುದ್ಧ ಆಹಾರದ ಸೇವನೆ.
  • ಭಜನೆ, ಹರಿಕಥೆ – ದೇವನಾಮ ಸ್ಮರಣೆಯ ಮೂಲಕ ಮನಸ್ಸಿಗೆ ಶಾಂತಿ.
  • ಪಲ್ಲಕ್ಕಿ ಉತ್ಸವ, ರಥೋತ್ಸವ – ದೇವರನ್ನು ಮೆರೆಯಿಸುವ ನೋಟ.
  • ಹೂವಿನ ಅಲಂಕಾರ, ಹಳ್ಳಿ ವ್ಯಾಪಾರಗಳು, ಪುಟ್ಟ ಮೇಳಗಳು – ನಾಡಿನ ಪ್ರತಿರೂಪ.
  • “ಜಾತ್ರೆ ಎಂದರೆ ಹಳ್ಳಿಯು , ನಗರಕ್ಕೆ ಕೈ ನೀಡುವ ಕ್ಷಣ” ಇಂತಹ ಧಾರ್ಮಿಕ ಮೇಳಗಳು ಕೇವಲ ಭಕ್ತಿಯ ಕೇಂದ್ರೀಕೃತ ಉತ್ಸವವಲ್ಲ; ಇವು ಸಮುದಾಯದ ಹಿತಕ್ಕಾಗಿ ನಾನಾ ರೀತಿಯ ಲಾಭವನ್ನು ನೀಡುತ್ತವೆ:
  • ಸಮುದಾಯದಲ್ಲಿ ಒಗ್ಗಟ್ಟು, ಭಾವೈಕ್ಯತೆ.
  • ಆರ್ಥಿಕ ಚಟುವಟಿಕೆ – ಸ್ಥಳೀಯ ವ್ಯಾಪಾರ, ಕಲೆ, ಕೌಶಲ್ಯಗಳಿಗೆ ವೇದಿಕೆ.
  • ಮಕ್ಕಳಿಗೆ ಸಂಸ್ಕೃತಿಯ ಪಾಠ – ಜೀವನದ ಅರಿವಿಗೆ ಮುನ್ನುಡಿ.
  • ಗ್ರಾಮ–ನಗರ ಸಂಬಂಧವನ್ನು ಗಟ್ಟಿಗೊಳಿಸುವ ಸಂಪರ್ಕ ಸೇತುವೆ.

“ಜಾತ್ರೆಗಳಲ್ಲಿ ಪರಿಸರದ ಪ್ರೇಮವೂ ಪ್ರತಿಬಿಂಬಿತವಾಗುತ್ತದೆ”  ಜಾತ್ರೆಗಳಲ್ಲಿ ಬಳಸುವ ಹೂವಿನ ಅಲಂಕಾರ,  ಗರ್ಭಗೃಹ ಅಲಂಕಾರ, ಬಾಳೆಹಣ್ಣಿನ ತೋರಣ—all are biodegradable and eco-friendly. ಪ್ಲಾಸ್ಟಿಕ್ ಇಲ್ಲದ ಆಹಾರ ಸೇವನೆ, ಮಣ್ಣಿನ ಪಾತ್ರೆ ಉಪಯೋಗ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ—ಇವೆಲ್ಲವೂ ಸಾಂಪ್ರದಾಯಿಕ ಹಬ್ಬಗಳು ಪ್ರಕೃತಿಯನ್ನು ಹೇಗೆ ಗೌರವಿಸುತ್ತವೆ ಎಂಬುದನ್ನು ಪ್ರತಿಬಿಂಬಿಸುತ್ತವೆ. ಇದರಿಂದ ಪರಿಸರ ಜಾಗೃತಿಯನ್ನೂ ಸಾರಬಹುದು.

“ಜನತೆಯ ನುಡಿಗೆ ಜೀವ ತುಂಬುವ ಜಾತ್ರೆಯ ಜನಪದ ಗೀತ” ಜಾತ್ರೆಯ ಜೀವಾಳವನ್ನು ಕಾವ್ಯದ ರೂಪದಲ್ಲಿ ಈ ರೀತಿ ಅನಾವರಣ ಮಾಡಬಹುದು:

ಜಾತ್ರೆ ಎಂದರೆ ಕೇವಲ ಪೂಜೆ ಅಲ್ಲ, ಅತ್ತಿಗುಪ್ಪೆ ಜಾತ್ರೆಯ ಪಾನಕದ ಸ್ವಾದ, ಹೆಸರಘಟ್ಟದ ಗಂಗಮ್ಮನ ಕದಮೆ ಹಾಡು. ಸಮುದಾಯದ ಸ್ಫೂರ್ತಿಗೆ ನೂತನ ಚಾಲನೆ, ಒಗ್ಗಟ್ಟಿಗೆ ಉತ್ಸವವೇ ಸಹಜ ಪಾಠಶಾಲೆ. ಹಸಿವು ಹೊತ್ತ ಹೊತ್ತಿಗೆ ಅನ್ನದಾನ, ಮನಸ್ಸಿಗೆ ಶಾಂತಿಯೇ ಪರಮ ಪಾರಿಜಾತ. ಹಳ್ಳಿಯು ನಗರಕ್ಕೆ ಕೈ ನೀಡುವ ಕ್ಷಣ, ಕಲೆಯನು ಪುನರ್ಜನ್ಮ ನೀಡುವ ತರಣ. ಮಕ್ಕಳಿಗೆ ನೆನೆಪಾಗಿ ಉಳಿಯುವ ಕಲ್ಪನೆ, ಜಾತ್ರೆ ಎಂದರೆ ಸಂಸ್ಕೃತಿಯ ನವ ಚರಣೆ. ಇಲ್ಲಿ ಧರ್ಮವೂ ಇದೆ, ದಯೆಯೂ ಇದೆ, ಇಲ್ಲಿ ಉತ್ಸಾಹವೂ ಇದೆ, ಒಲವಿನ ಬಲೆ. ಇಂತಹ ಜಾತ್ರೆಗಳೇ ನಮ್ಮ ಜೀವಾಧಾರ, ಬದುಕಿನ ಹೂವಿನ ಮೆರವಣಿಗೆಗೆ ಸುತ್ತುವ ತಾರ.

“ಅಣ್ಣಮ್ಮ ಜಾತ್ರೆ – ನಾಡಿನ ನೆಲದ ಜೊತೆಗೆ ಬೆಸೆದ ನಂಬಿಕೆ” ಬೆಂಗಳೂರಿನ ಹಲವೆಡೆ, ವಿಶೇಷವಾಗಿ ಹಳ್ಳಿಗಳ ಸುತ್ತಮುತ್ತ, ಅಣ್ಣಮ್ಮ ದೇವಿಯ ಜಾತ್ರೆ ಜನಮಾನಸದಲ್ಲಿ ಆಳವಾಗಿ ನೆಲೆಸಿದ ಪರಂಪರೆ. ಅನೇಕ ಸ್ಥಳೀಯರು ಅನ್ನಮ್ಮ ದೇವಿಯ ಮೂರ್ತಿಯನ್ನು ತಾವು ವಾಸಿಸುವ ಪ್ರದೇಶಗಳಿಗೆ ತಂದು ಭಕ್ತಿಯಿಂದ ಪೂಜಿಸುತ್ತಾರೆ. ಇದು ದೇವಿಯ ದಯೆಯ ಪ್ರತಿಫಲವಾಗಿ ಕುಟುಂಬದ ಸಮೃದ್ಧಿ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸುವ ಒಂದು ಭಾವನಾತ್ಮಕ ಆಚರಣೆ. ಈ ಉತ್ಸವದ ವೇಳೆ ದೇವಿಗೆ ವಿಶೇಷ ಪೂಜೆ, ಅನ್ನದಾನ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಹವಾಸ ಉಂಟಾಗುತ್ತದೆ. ಈ ಮೂಲಕ ದೇವರನ್ನು ಮನೆಯ ಪಡಿಯಲ್ಲಿ ಊರೂರಿಗೆ ತರುತ್ತಿರುವ ಸಂಪ್ರದಾಯ ನಾಡಿನ ಭಕ್ತಿಯ ವಿಶಿಷ್ಟ ವ್ಯಕ್ತೀಕರಣವಾಗಿರುತ್ತದೆ.

“ಜಾತ್ರೆಗಳೇ ಜೀವಂತ ಸಂಸ್ಕೃತಿಯ ನಡುಬಿಡುಗು” ಇವೆಲ್ಲದರ ಪಾರ್ಶ್ವದಲ್ಲಿ ನಿಲ್ಲುವ ಸತ್ಯವೆಂದರೆ – ಜಾತ್ರೆಗಳು ನಮ್ಮ ಸಂಸ್ಕೃತಿಯ ಜೀವಾಳ. ಇವು ಕೇವಲ ಧಾರ್ಮಿಕ ತಿರುವುಗಳಲ್ಲ. ಇವು ಮಾನವೀಯತೆ, ನೈಸರ್ಗಿಕ ಸಮನ್ವಯ, ಹಾಗೂ ಸಂಸ್ಕೃತಿಯ ಪರಂಪರೆಗಳನ್ನು ಜೀವಂತವಾಗಿಟ್ಟುಕೊಳ್ಳುವ ಶಕ್ತಿ ಸಂಪನ್ನವಾದ ಆಚರಣೆಗಳು. ಇಂದು ನಾವು ಈ ಜಾತ್ರೆಗಳನ್ನು ಸಂರಕ್ಷಿಸಿದರೆ, ನಾಳೆ ನಾವೇ ನಮ್ಮ ನಾಡು–ನದಿಗಳ ಸಂಸ್ಕೃತಿಯನ್ನು ಬದುಕಿಸುವವರಾಗುತ್ತೇವೆ.

“ಜಾತ್ರೆ ಅಂದರೆ ದೇವರ ಭೇಟಿಯ ಹೆಸರಿನಲ್ಲಿ ಒಟ್ಟಾಗುವ ನೆನೆಪು – ಹೂವಿನ ಮುಸುಕು – ಅದು ಬದುಕಿನ ಉತ್ಸವ. 

ನೀವೆಲ್ಲರೂ ಇಂತಹ ಜಾತ್ರೆಗಳ ಬಗ್ಗೆ ಅರಿವು ಮೂಡಿಸಿ, ಭಾಗವಹಿಸಿ, ಮತ್ತು ಮುಂದಿನ ಪೀಳಿಗೆಗೂ ಸಂಸ್ಕೃತಿಯ ಬೆಳಕನ್ನು ಹರಡಿ!ಶ್ರೀ ಎಸ್ ಸುರೇಶ್

ನಮ್ಮ ಬಡಾವಣೆಯ ರಾಮೋತ್ಸವದ ಬಗ್ಗೆ

ಶ್ರೀ ಎಸ್ ಸುರೇಶ್ 

🎶 _*ರಾಮಾ ರಾಮಾ ಜಯ ರಾಮಾ ಸೀತಾ ರಾಮಾ*_ 🎶
ಭಕ್ತಿಭಾವದಿಂದ ಪೂರಿತ ಕನ್ನಡ ಭಕ್ತಿಗೀತೆ
🎵
ರಾಮಾ ರಾಮಾ ಜಯ ರಾಮಾ ಸೀತಾ ರಾಮಾ
ಧರ್ಮದ ದೀಪನೇ, ಶೀಲದ ಮೂರ್ತಿಯ ರಾಮಾ
ರಾಮಾ ರಾಮಾ ಜಯ ರಾಮಾ ಸೀತಾ ರಾಮಾ
ಅವನ ನಾಮಸ್ಮರಣೆಗೆ ಎದೆ ತುಂಬಿ ಹರಷಮ್ಮಾ

🌸
ಅಯೋಧ್ಯೆಯ ರಾಜಕುಮಾರ, ರಾಜದೃಷ್ಟಿಯ ನಾಥಾ
ಕೈಕೇಯಿ ಬರೆದ ಪಥವನು ನೀನು ಧೈರ್ಯದಿಂದ ನಡೆದಾ
ವನವಾಸದ ಪಾಠವನು ತಾಳ್ಮೆಯಿಂದ ಕಲಿಸಿದಾ
ಸೀತೆಯ ಪ್ರೀತಿಗೆ ಸಾಕ್ಷಿಯಾದ ನಂಬಿಕೆಯ ರಾಮಾ

🎵
ರಾಮಾ ರಾಮಾ ಜಯ ರಾಮಾ ಸೀತಾ ರಾಮಾ
ಹನುಮಂತನ ಶ್ರದ್ಧೆಯೇ ನಿನ್ನ ಪರಾಕ್ರಮದ ಗಾಥಾ
ರಾಮಾ ರಾಮಾ ಜಯ ರಾಮಾ ಸೀತಾ ರಾಮಾ
ರಾವಣನ ಅಹಂಕಾರವನು ನೀನು ಕೊನೆಗೊಳಿಸಿದಾ

🌿
ಲವಕುಶರ ತಂದೆಯಾದ ನೈತಿಕತೆಯ ಗುರುನೇ
ರಾಮರಾಜ್ಯದ ಕನಸನು ನೀನು ತೋರಿಸುವೆ
ಭಕ್ತಿಗೆ, ಬಾಳಿಗೆ ಬೆಳಕು ನೀಡುವ ನಿನ್ನ ನಾಮಾ
ಭರತನ ಶ್ರದ್ಧೆಯಲಿ, ಶತ್ರುಘ್ನನ ಶಕ್ತಿಯಲಿ ನೀನೇ ರಾಮಾ

🎉
🌟 ಶ್ರೀ ರಾಮೋತ್ಸವ – ೩೯ನೇ ವರ್ಷದ ಸಂಭ್ರಮ 🌟
ನಿಮ್ಮ ೩೯ನೇ ರಾಮೋತ್ಸವಕ್ಕೆ ಹೃತ್ಪೂರ್ವಕ ಶುಭಾಶಯಗಳು 🙏
ಸೂರ್ಯ ಜಯರಾಮ ಅವರ ಶ್ರದ್ಧಾ ಹಾಗೂ ನಾಯಕತ್ವದಲ್ಲಿ
ಈ ಉತ್ಸವ ಭಕ್ತಿ, ಸಾಂಸ್ಕೃತಿಕ ಒಗ್ಗಟ್ಟು ಮತ್ತು ಸಮಾಜ ಸೇವೆಗೆ ಮಾದರಿಯಾಗಲಿ.
ರಾಮನ ಆಶೀರ್ವಾದ ಸದಾ ನಿಮ್ಮೆಲ್ಲರ ಮೇಲಿದೆ ಎಂಬ ಪ್ರಾರ್ಥನೆ 🌺

🌼 ಖುಷಿಯ ಚಿಗುರೊಡೆಯುವ ಈ ಪವಿತ್ರ ಆಹ್ವಾನಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು 🙏 ಬಡಾವಣೆಯ ಸಾಂಸ್ಕೃತಿಕ ಪರಂಪರೆಯನ್ನು ಜೀವಂತವಾಗಿಡುವ ಈ ಪುಣ್ಯಯತ್ನ ಶ್ಲಾಘನೀಯವಾಗಿದೆ.
ಇದು ಭಕ್ತಿಗೆ ಪಾಠ, ಒಗ್ಗಟ್ಟಿಗೆ ಹಾದಿ, ಸಂತಸದ ಸಂಭ್ರಮ.

🪔 ರಾಮನ ಮಹಿಮೆ – ಬದುಕಿಗೆ ದಾರಿ ತೋರುವ ದೀಪದಂತೆ
ಶ್ರೀರಾಮನು ಧರ್ಮದ ದೀಪ, ಶೀಲದ ಪ್ರತೀಕ, ಕಠಿಣ ಕಾಲದಲ್ಲೂ ಸತ್ಯಮಾರ್ಗವನ್ನೇ ಅವಲಂಬಿಸಿದ ಧೀರ ನಾಯಕ.
ಅವನ ಜೀವನವು ನಿಷ್ಠೆ, ತಾಳ್ಮೆ, ಶ್ರದ್ಧೆ, ಸೇವಾಭಾವನೆ ಹಾಗೂ ಪ್ರಜ್ಞಾವಂತತೆಯ ಮೌಲ್ಯಪೂರ್ಣ ಪಾಠವಾಗಿದೆ.
ರಾಮನ ನಾಮಸ್ಮರಣೆ ಮನಸ್ಸಿಗೆ ಶಾಂತಿ, ಆತ್ಮಕ್ಕೆ ಶುದ್ಧಿ ನೀಡುತ್ತದೆ 💫

🌿
ರಾಮೋತ್ಸವ – ನಮ್ಮ ಸಮುದಾಯದ ಹಬ್ಬ
🎊 ಕಲೆಯ, ಭಕ್ತಿಯ, ಸಂಸ್ಕೃತಿಯ ಮೇಳ
👧🏻👦🏼 ಮಕ್ಕಳ ಪ್ರತಿಭೆಗೆ ವೇದಿಕೆ
👵🏼👴🏽 ಹಿರಿಯರ ಅನುಭವಕ್ಕೆ ಗೌರವ
🏡 ಪ್ರತಿ ಮನೆಯ ಬಾಗಿಲಿಗೆ ರಾಮನ ಕೃಪೆಯ ಬೆಳಕು ಬೀರುವ ಪವಿತ್ರ ಸಮಯ
🤝 ಸಮಾಜದಲ್ಲಿ ಒಗ್ಗಟ್ಟು, ಸಹಕಾರ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿಸುವ ಅವಸರ
📚 ಬಾಳಿನ ಪಾಠಗಳು – ಪಾಠಶಾಲೆಯ ಹೊರಗೇ ಕಲಿಸುವ ಆಧ್ಯಾತ್ಮದ ಪಾಠಗಳು

🌸
ರಾಮ = ಅರ್ಥ ಮತ್ತು ಅರಿವು:

ರಾ – ರಾಮನ ಸ್ಮರಣೆ: ಆದರ್ಶ ಜೀವನದ ಪ್ರೇರಣೆ

ಮ – ಮೌಲ್ಯಗಳು: ಸತ್ಯ, ಧರ್ಮ, ಶೀಲ, ಶಾಂತಿ ಬೆಳೆಸುವ ಕಾಲ

ಓ – ಓದು ಮತ್ತು ಓಲೈಕೆ: ಪಾಠವಲ್ಲದ ಪಾಠ ಕಲಿಯುವ ವೇದಿಕೆ

ತ – ತಾಳ್ಮೆ ಮತ್ತು ತಾತ್ವಿಕತೆ: ದೈವಿಕ ಬದುಕಿನಿಂದ ಬೋಧನೆ

ಸ – ಸಂಸ್ಕೃತಿ ಮತ್ತು ಸಮಾನತೆ: ಸಮಾನ ಅವಕಾಶ, ಒಗ್ಗಟ್ಟಿನ ಸಂದೇಶ

ವ – ವಾತ್ಸಲ್ಯ: ಕುಟುಂಬದಂತೆ ಸಮುದಾಯದ ಒಡನಾಟ

📿
ಸ್ಮರಣೀಯ ಶ್ಲೋಕ ಮತ್ತು ಘೋಷಣೆಗಳು:
📜 ರಾಮ ರಾಮೇತಿ ರಾಮೇತಿ, ರಮೇ ರಾಮೇ ಮನೋರಮೇ
🌿 ಒಗ್ಗಟ್ಟಿಗೆ ಓದು, ಸಂಸ್ಕೃತಿಗೆ ಸಾಥಿ – ರಾಮೋತ್ಸವ ನಮ್ಮಪಾಥಿ
🕊️ ಶಾಂತಿ, ಶ್ರದ್ಧೆ, ಸಂಸ್ಕೃತಿಯ ಬೆಳಕು – ರಾಮೋತ್ಸವದ ಹರಕೆ
🌺 ರಾಮನಲ್ಲಿ ನೆಮ್ಮದಿ, ರಾಮನಲ್ಲಿ ಶಕ್ತಿ, ರಾಮನಲ್ಲಿ ಸಮತೋಲನ

🎵
ರಾಮಾ ರಾಮಾ ಜಯ ರಾಮಾ ಸೀತಾ ರಾಮಾ
ಮನಸಿಗೆ ನೆಮ್ಮದಿ, ಜೀವಕೆ ಶಕ್ತಿ ನೀ ರಾಮಾ
ರಾಮಾ ರಾಮಾ ಜಯ ರಾಮಾ ಸೀತಾ ರಾಮಾ
ದಿನವೂ ನಿನ್ನ ನಾಮದಿಂದ ಶುಭವಾಗಲಿ ಸಾಯಂಕಾಲವೂ ರಾಮಾ

🌺 ರಾಮಾ ರಾಮಾ ಜಯ ರಾಮಾ… ಸೀತಾ ರಾಮಾ…

ಚಿತ್ರ ಕಲೆ 

ಶ್ರೀ ಕೆ ವಿ ಜಯರಾಂ ಅವರು ರಚಿಸಿದ  ಚಿತ್ರಗಳು .

ಶ್ರೀ  ಕೆ ವಿ ಜಯರಾಂ ಅವರು ರಚಿಸಿರುವ ಈ ಚಿತ್ರ  ಎಷ್ಟು ಸುಂದರವಾಗಿದೆಯೆಂದರೆ, ಸುಂದರ ಹುಡುಗಿಯ ಚಿತ್ರಕಲೆಗೆ ” ವಿಶ್ವಸುಂದರಿ ” ಸ್ಪರ್ಧೆ ಇಟ್ಟರೆ, ಈ ಚಿತ್ರಕ್ಕೆ ಲಭಿಸುತ್ತದೆ!

 

ಶ್ರೀ  ಕೆ ವಿ ಜಯರಾಂ ಅವರು ರಚಿಸಿರುವ ಉತ್ತರ ಅಮೇರಿಕದ ಹಿಮಕರಡಿ 

 

 

ಶ್ರೀ  ಕೆ ವಿ ಜಯರಾಂ ಅವರು ರಾಮನವಮಿಗಾಗಿ ರಚಿಸಿರುವ ಚಿತ್ರ “ರಾಮ ಲಲ್ಲ  ” 

ಶ್ರೀ  ಕೆ ವಿ ಜಯರಾಂ ಅವರು ರಚಿಸಿರುವ ಚಿತ್ರ “ದಾಸಯ್ಯ ” 

ಶ್ರೀ  ಕೆ ವಿ ಜಯರಾಂ ಅವರು ರಚಿಸಿರುವ ಚಿತ್ರ “ಉಸ್ತಾದ್ ಜಾಕಿರ್ ಹುಸೇನ್   ” 

ಶ್ರೀ  ಕೆ ವಿ ಜಯರಾಂ ಅವರು ರಚಿಸಿರುವ ಚಿತ್ರ ಮುದ್ದು ಮರಿಗಳು 

ಶ್ರೀ  ಕೆ ವಿ ಜಯರಾಂ ಅವರು ತಾಯಂದಿರ ದಿನಕ್ಕಾಗಿ ರಚಿಸಿರುವ ಚಿತ್ರ ಎರಡು ಅದ್ಬುತ ಚಿತ್ರಗಳು 

  •  

    ಕೇವಲ ಒಂದು ತಿಂಗಳಲ್ಲಿ ಇಷ್ಟೊಂದು ಅದ್ಭುತ ಚಿತ್ರಗಳನ್ನು ರಚಿಸಿ ಕಳಿಸಿದ ಶ್ರೀ ಕೆ ವಿ ಜಯರಾಂ ಅವರಿಗೆ ಧನ್ಯವಾದಗಳು 

ನಿಮ್ಮ ಅಭಿಪ್ರಾಯಗಳು 

ಡಾ || ಎ ಎಸ್ ಚಂದ್ರಶೇಖರ ರಾವ್ 

ಆಗಲೇ ಪತ್ರಿಕೆಗೆ ಒಂದು ವರ್ಷ ತುಂಬಿತು ಎಷ್ಟು ಬೇಗ ಈ ಪತ್ರಿಕೆ ಓದುಗರಿಗೆ ವೈವಿಧ್ಯಮಯವಾದ ವಿಚಾರಗಳನ್ನು ತಿಳಿಸುವುದು ಪ್ರತಿಭಾವಂತರನ್ನು ಪರಿಚಯಿಸುವುದು ಅಲ್ಲದೆ ಬುದ್ಧಿಗೆ ಕಸರತ್ತು .ಸವಾಲುಗಳನ್ನು ಕೊಡುವ ಪ್ರಶ್ನೆ ಪದಬಂಧ ಮುಂತಾದವುಗಳು ಸ್ಪರ್ಧೆಗಾಗಿ ಹೆಚ್ಚುವಂತೆ ಮಾಡಿದೆ ಮುಂದೆ ಈ ಪತ್ರಿಕೆ ಇನ್ನೂ ಚೆನ್ನಾಗಿ ಬೆಳೆಯಲಿ ಎಂದು ಹಾರೈಸುತ್ತಾ ಸಂಪಾದಕರನ್ನು ಅಭಿನಂದಿಸಿ ಬರಹಗಾರರಿಗೂ ಓದುವರಿಗೂ ಧನ್ಯವಾದಗಳು ಅರ್ಪಿಸುತ್ತೇನೆ.

ಶ್ರೀ ಕೆ ವಿ ಜಯರಾಂ 

ವಿಷಯ: ಏಪ್ರಿಲ್ ಪ್ರತಿಭಾ ಪತ್ರಿಕೆ
ಪ್ರತಿಭೆಗಳ ಪ್ರಚಾರಕ್ಕಾಗಿ ಮೇಲಿನ ಪತ್ರಿಕೆಯ ಪ್ರಕಟಣೆಯ ಒಂದು ವರ್ಷವನ್ನು ಪೂರ್ಣಗೊಳಿಸಿದ್ದಕ್ಕಾಗಿ ಅಭಿನಂದನೆಗಳು.ಪ್ರಖ್ಯಾತ ಎಂಜಿನಿಯರ್ ಮತ್ತು ಮೆಟ್ರೋ ತಜ್ಞ ಶ್ರೀ ವಿ ಎನ್ ಶರ್ಮಾ ಅವರನ್ನು ಪರಿಚಯಿಸಿದ್ದಕ್ಕಾಗಿ ಮತ್ತು ಬಿಎಂಆರ್‌ಸಿಎಲ್‌ನ ವಿವಿಧ ಅಂಶಗಳನ್ನು ಎತ್ತಿ ತೋರಿಸಿದ್ದಕ್ಕಾಗಿ ಧನ್ಯವಾದಗಳು. ಒಂದು ದಿನ ನೀವು ನಮ್ಮ ಲೇಔಟ್‌ನಲ್ಲಿ ಶ್ರೀ ಶರ್ಮಾ ಅವರಿಂದ ಲೆಕ್ಚರ್ ಅನ್ನು ಏರ್ಪಡಿಸುತ್ತೀರಿ ಎಂದು ನಾನು ಭಾವಿಸುತ್ತೇನೆ.ಮಕ್ಕಳಿಗೆ ಹೇಗೆ ಶಿಕ್ಷಣ ನೀಡಬೇಕೆಂಬುದರ ಕುರಿತು ಪೋಷಕರು ಮತ್ತು ಶಿಕ್ಷಕರಿಗೆ ಡಾ ಚಂದ್ರಶೇಖರ ರಾವ್ ಅವರ ಸಲಹೆ ತುಂಬಾ ಉಪಯುಕ್ತವಾಗಿದೆ ಮತ್ತು ನಮ್ಮ ಲೇಔಟ್‌ನಲ್ಲಿರುವ ಎಲ್ಲಾ ಯುವ ಪೋಷಕರು ಅವರ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.

ಹೆಚ್ಚಿನ ಮಕ್ಕಳು ಮತ್ತು ಯುವಕರು ವಿವಿಧ ವಿಷಯಗಳ ಕುರಿತು ಕವಿತೆಗಳು ಮತ್ತು ಲೇಖನಗಳನ್ನು ಕೊಡುಗೆ ನೀಡುವಲ್ಲಿ ಭಾಗವಹಿಸಿದರೆ ನಾನು ಕೃತಜ್ಞನಾಗಿದ್ದೇನೆ.

ಪೋಷಕರು ಮತ್ತು ಅಜ್ಜ-ಅಜ್ಜಿಯರ ಪ್ರಾಮುಖ್ಯತೆ
ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಬಗ್ಗೆ ಅವರ ಆಲೋಚನೆಗಳು ಯಾವುವು
ಕ್ರೀಡೆಯ ಮಹತ್ವ
ಜೀವನದಲ್ಲಿ ಅವರು ಏನಾಗಲು ಬಯಸುತ್ತಾರೆ
ಸ್ವಚ್ಛತೆ ಮತ್ತು ಪರಿಸರಕ್ಕೆ ಅವರು ಹೇಗೆ ಕೊಡುಗೆ ನೀಡಲು ಬಯಸುತ್ತಾರೆ
ಸ್ನೇಹಿತರ ಪ್ರಾಮುಖ್ಯತೆ
ಅವರು ಯಾವ ಸ್ಥಳಗಳಿಗೆ ಭೇಟಿ ನೀಡಲು ಬಯಸುತ್ತಾರೆ ಇತ್ಯಾದಿ.

ನಮ್ಮ ಲೇಔಟ್‌ನಲ್ಲಿ ಅನೇಕ ಪ್ರಖ್ಯಾತ ಶಿಕ್ಷಕರು ಮತ್ತು ತಜ್ಞರೊಂದಿಗೆ, ಬೇಸಿಗೆಯ ತಿಂಗಳುಗಳಲ್ಲಿ ನಮ್ಮ ಲೇಔಟ್‌ನಲ್ಲಿ ಕಾರ್ಯಾಗಾರವನ್ನು ನಡೆಸಬೇಕೆಂದು ನಾನು ಬಯಸುತ್ತೇನೆ.

ಶುಭಾಶಯಗಳು

Categories: Uncategorized

0 Comments

Leave a Reply

Avatar placeholder

Your email address will not be published. Required fields are marked *