
Table of Contents
ಪ್ರತಿಭಾ ಪತ್ರಿಕೆ – ಅಕ್ಟೋಬರ್ 2025
ಸಂಪಾದಕರ ಬರಹ
ಮುಖ್ಯವಾಗಿ ಈ ಬಾರಿಯಿಂದ ಬಹುಮಾನವನ್ನು 250ಗಳಿಂದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಶ್ರೀಮತಿ ರಾಜೇಶ್ವರಿ ನಾಗರಾಜ್ ಅವರೂ ಬಹುಮಾನಕ್ಕೆ ಕೊಡುಗೆ ಮಾಡಿರುವುದರಿಂದ, ಬಹುಮಾನದ ಮೊತ್ತವನ್ನು ಇನ್ನು ಮುಂದೆ ರೂ 500 ಕ್ಕೆ ಹೆಚ್ಚಿಸಲಾಗಿದೆ.
ಶ್ರೀಮತಿ ರಾಜೇಶ್ವರಿ ನಾಗರಾಜ್ ಅವರಿಗೆ ವಿಶೇಷ ಧನ್ಯವಾದಗಳು
ರಾಮಾಯಣ ಮತ್ತು ಮಹಾಭಾರತಗಳ ಕಥೆಗಳನ್ನು ಬರೆದು ಕಳಿಸಲು ತಿಳಿಸಿದ್ದೆ. ಕೆಲವರು ಬರೆದು ಕಳಿಸುವರು ಎಂದು ತಿಳಿದುಕೊಂಡಿದ್ದೆ. ಆದರೆ ಯಾರೂ ಪ್ರಯತ್ನ ಪಟ್ಟಂತೆ ಕಾಣಲಿಲ್ಲ .
ಸಾಮಾನ್ಯವಾಗಿ ಯಾವುದೇ ವಿಷಯದ ಬಗ್ಗೆ ತಿಳಿದುಕೊಂಡಿದ್ದೇವೆ ಎನ್ನುವುದರಲ್ಲಿ ಅನೇಕ ಹಂತಗಳಿವೆ. ನಾನು ಅಧ್ಯಾಪಕನಾಗಿ ಇದನ್ನು ಕಂಡುಕೊಂಡಿದ್ದೇನೆ. ಮೊದಲನೆಯ ಹಂತವು, ವಿಷಯವನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳುವುದು ಮಾತ್ರ. ಅಂದರೆ ನಿಮ್ಮಲ್ಲಿ ಅನೇಕರು ರಾಮಾಯಣದ ಕಥೆಗಳನ್ನು ಸವಿಸ್ತಾರವಾಗಿ ಹೇಳುತ್ತೀರಿ, ಬರೆಯುತ್ತೀರಿ. ಆದರೆ ಎರಡನೇ ಮುಖ್ಯವಾದ ಒಂದು ಹಂತ ಇದೆ. ಅದನ್ನು ನಾವೇ ಪ್ರಶ್ನೆ ಮಾಡಿ ಅಥವಾ ಇತರರ ಪ್ರಶ್ನೆಗಳಿಗೆ ಉತ್ತರ ಕೊಡುವುದರ ಮೂಲಕ ಇನ್ನೂ ಆಳವಾಗಿ ಅರ್ಥಮಾಡಿಕೊಳ್ಳುವುದು.
ಪ್ರಶ್ನೆಗಳಿಗೆ ಉತ್ತರ ಕೊಡುವಷ್ಟು ತಿಳಿದುಕೊಳ್ಳುವುದೇ ಎರಡನೆಯ ಹಂತ.
ಹೀಗೆ ಮಾಡಿದ್ದಿದ್ದರೆ, ನಿಮಗೆ ಅದಕ್ಕೆ ಉತ್ತರ ಹೊಳೆಯುತ್ತಿತ್ತು. ಇಂದಿನ ಯುವ ಪೀಳಿಗೆಗೆ ನಾವು ಏನನ್ನಾದರೂ ಹೇಳಬೇಕಾದರೆ, ಅವರ ಪ್ರಶ್ನೆಗಳಿಗೆ ಸರಿಸಮನಾದ ಉತ್ತರವನ್ನು ಕೊಡಲು ನಾವು ಶಕ್ತರಾಗಿದ್ದರೆ ಮಾತ್ರ ಅವರು ನಾವು ಹೇಳಿದ್ದನ್ನು ಕೇಳುತ್ತಾರೆ. ಇದು ಅತ್ಯಂತ ಮುಖ್ಯವಾದ ವಿಚಾರ.
ಯಾರೊಬ್ಬರೂ ಇದಕ್ಕೆ ಉತ್ತರ ಕಳಿಸುದಿರುವುದು ನನಗೆ ಆಶ್ಚರ್ಯವಾಗಿದೆ. ಯಾರಾದರೂ ಒಬ್ಬರಾದರೂ ಸ್ವಲ್ಪವಾದರೂ ಬರೆದು ಕಳಿಸಿದ್ದಿದ್ದರೆ ಬಹುಮಾನ ಬರುತ್ತಿತ್ತು . ಈಗ ಯಾರಿಗೂ ಬಹುಮಾನವಿಲ್ಲದಂತಾಗಿದೆ. ದಯವಿಟ್ಟು ಈ ಸಂಚಿಕೆಯಲ್ಲಿ ನಾನು ಬರೆದಿರುವ ಉತ್ತರವನ್ನು ಕೂಲಂಕುಶವಾಗಿ ಓದಿರಿ ಎಂದು ಕೇಳಿಕೊಳ್ಳುತ್ತೇನೆ.
ಹಾಗೆಯೇ ಈ ಬಾರಿ ಅತಿ ಸುಲಭವಾದ ಕರ್ನಾಟಕದ ಊರುಗಳು ಮತ್ತು ಹಳ್ಳಿಗಳ ಹೆಸರುಗಳನ್ನು ಒಳಗೊಂಡ ಪದಬಂಧವನ್ನು ಕೊಡಲಾಗಿದೆ ದಯವಿಟ್ಟು ಎಲ್ಲರೂ ಪ್ರಯತ್ನಿಸಿ.
ಹಾಗೆಯೇ ದಯವಿಟ್ಟು ಈ ಪತ್ರಿಕೆಯ ಲಿಂಕುಗಳನ್ನು ನಿಮ್ಮ ನೆಂಟರಿಗೆ ಹಾಗೂ ಸ್ನೇಹಿತರಿಗೆ ವಿತರಿಸಬೇಕಾಗಿ ನಾನು ಕೇಳಿಕೊಳ್ಳುತ್ತೇನೆ.
ಕಳೆದ ಸಂಚಿಕೆಯಿಂದ ವಿಶೇಷ ವ್ಯಕ್ತಿ ಎನ್ನುವ ಬದಲಾಗಿ ವ್ಯಕ್ತಿ ಪರಿಚಯ ಎಂದು ಮಾಡಲಾಗಿರುವುದು ನಿಮಗೆ ತಿಳಿದೇ ಇದೆ ನೀವು ಯಾರಾದರೂ ಏನಾದರೂ ಒಂದು ಸಾಧನೆಯನ್ನು ಮಾಡಿದ್ದರು ಸಹ ಅದನ್ನು ಸಂಕ್ಷಿಪ್ತವಾಗಿ ಬರೆದು ಕಳಿಸಿದರೆ ಸೂಕ್ತ ಸಂಚಿಕೆಯಲ್ಲಿ ಅದನ್ನು ಪ್ರಕಟಿಸಲಾಗುವುದು.
ಕಳೆದ ಸಂಚಿಕೆಯ ಬಹುಮಾನ ವಿಜೇತರು – ಶ್ರೀಮತಿ ಗೀತಾ ಕೃಷ್ಣಮೂರ್ತಿ
ರಾಮಾಯಣ – ಮಹಾಭಾರತ – ಉತ್ತರಗಳು
ರಾಮಾಯಣ
1) ದಶರಥನು ನು ಭೇಟೆಗಾಗಿ ಕಾಡಿಗೆ ಹೋದನು
2) ನದಿಯಿಂದ ಬರುವ ಶಬ್ದವು ಜಿಂಕೆಯದೆಂದು ಭಾವಿಸಿ ಅವನು ಹೊಡೆದ ಬಾಣದಿಂದ ಶ್ರವನಕುಮಾರನು ಮೃತಪಟ್ಟಾಗ , ಅವನ ಪೋಷಕರು ” ನೀನೂ ಕೊನೆಗಾಲದಲ್ಲಿ ಪುತ್ರಶೋಕ ಅನುಭವಿಸು ” ಎಂದು ಶಪಿಸಿದರು .
3) ಮುಂದೆ, ಶ್ರೀರಾಮಚಂದ್ರನು ಕಾಡಿಗೆ ಹೊರಟಾಗ, ದಶರಥನಿಗೆ ಬೇಸರವಾಯಿತು .
4)ದಶರಥನು ಶ್ರವನಕುಮಾರನ ಪೋಷಕರ ಶಾಪವೇ ಇದಕ್ಕೆ ಕಾರಣ ಎಂದು ಅರಿತನು.
5) ಮುಂದೆ, ಸೀತಾದೇವಿಯು ಕಾಡಿನಲ್ಲಿ ಕಂಡ ಚಿನ್ನದ ಜಿಂಕೆಯನ್ನು ತಂದುಕೊಡುವಂತೆ ಶ್ರೀರಾಮಚಂದ್ರನನ್ನು ಕೇಳಿದಳು.
6) ಶ್ರೀರಾಮನು ಜಿಂಕೆಯ ಭೇಟೆಗೆ ಹೋದನು.
7)ಶ್ರೀರಾಮನು ಜಿಂಕೆಯನ್ನು ಸಂಹರಿಸಿದಾಗ , ಅದು ಮಾರೀಚನ ರೂಪದಿಂದ ಪ್ರಯಾಣ ಬಿಟ್ಟಿತು.
8) ಇದೇ ಸಮಯದಲ್ಲಿ ರಾವಣನು ಸೀತೆಯನ್ನು ಅಪಹರಿಸಿ, ಅಶೋಕವನದಲ್ಲಿ ಇಟ್ಟನು
9) ಅಂಜನೇಯನು ಸೀತಾದೇವಿ ಇರುವ ಸ್ಥಳವನ್ನು ಪತ್ತೆಮಾಡಿ, ಶ್ರೀರಾಮನಿಗೆ ತಿಳಿಸಿದನು.
10) ಶ್ರೀರಾಮನು ರಾವಣನೊಂದಿಗೆ ಯುದ್ಧಮಾಡಿ, ಜಯಶಾಲಿ ಆದನು.
11) ನಂತರ ಸೀತೆಯನ್ನು ಮತ್ತೆ ಆಯೋಧ್ಯೆಗೆ ಕರೆತಂದನು .
12) ಎಲ್ಲರೂ ಶ್ರೀರಾಮಚಂದ್ರನನ್ನು ಕೊಂಡಾಡಿದರು.
ಮಹಾಭಾರತವು, ಪಾಂಡವರ ಜನನ ದಿಂದ ಆರಂಭವಾಗಿ, ಕೃಷ್ಣನ ಮರಣದೊಂದಿಗೆ ಕೊನೆಗೊಳ್ಳುತ್ತದೆ, ಮತ್ತು ಅವನ ರಾಜವಂಶದ ನಂತರದ ಅಂತ್ಯ ಮತ್ತು ಪಾಂಡವ ಸಹೋದರರು ಸ್ವರ್ಗಕ್ಕೆ ಹೋದವರೆಗೂ ವಿಸ್ತರಿಸಿದೆ. ಇಷ್ಟರಲ್ಲಿ ಯಾವುದಾದರೂ ಸನ್ನಿವೇಶ ಬರೆಯಬಹುದು.
ಮಹಾಭಾರತ
1) ಪ್ರಸೇನನು ಭೇಟೆಗಾಗಿ ಕಾಡಿಗೆ ಹೋದನು.
2) ಸಿಂಹವು ಅವನನ್ನು ಕೊಂಡು, ಶ್ಯಮಂತಕ ಮಣಿಯನ್ನು ಅಪಹರಿಸಿತು.
3)ಆದರೆ, ಪ್ರಸೇನನು ಬಾರದಿರಲು, ಶ್ರೀ ಕೃಷ್ಣನ ಮೇಲೆ ಅಪವಾದವು ಬಂದಿತು.
4)ಶ್ರೀ ಕೃಷ್ಣನು, ತಾನು ಚೌತಿಯ ದಿನ ಚಂದ್ರನನ್ನು ನೋಡಿದ್ದೇ ಇದಕ್ಕೆ ಕಾರಣ ಎಂದು ಅರಿತನು.
5) ಪ್ರಸೇನನು ಶ್ಯಮಂತಕ ಮಣಿಯನ್ನು ಧರಿಸಿ ಬೇಟೆಗೆ ಹೋಗಿದ್ದನ್ನು ಶ್ರೀ ಕೃಷ್ಣನು ತಿಳಿದನು
6) ಶ್ರೀ ಕೃಷ್ಣನು ಕಾಡಿಗೆ ಹೋಗಿ ಶ್ಯಮಂತಕ ಮಣಿಯನ್ನು ತರಬೇಕೆಂದು ನಿಶ್ಚಯಿಸಿದನು
7) ಇಷ್ಟರಲ್ಲಿ ಜಾಂಬುವಂತನು ಸಿಂಹವನ್ನು ಸಂಹರಿಸಿ, ಶ್ಯಮಂತಕ ಮಣಿಯನ್ನು ತೆಗೆದುಕೊಂಡನು
8)ಅವನು ಅದನ್ನು ಗುಹೆಯಲಲ್ಲಿದ್ದ ತನ್ನ ಮಗುವಿನ ತೊಟ್ಟಿಲಿಗೆ ಕಟ್ಟಿದನು
9) ಶ್ರೀ ಕೃಷ್ಣನು ಕಾಡಿನಲ್ಲೆಲ್ಲಾ ಸಂಚರಿಸಿ, ಈ ವಿಷಯವನ್ನು ತಿಳಿದನು.
10) ಶ್ರೀ ಕೃಷ್ಣನು ಜಾಂಬುವಂತನೋಡನೆ ಯುದ್ಧಮಾಡಿ, ಜಯಶಾಲಿ ಆದನು.
11) ನಂತರ ಶ್ಯಮಂತಕ ಮಣಿಯನ್ನು ಮತ್ತೆ ಸತ್ರಾಜಿತನಿಗೆ ಕೊಟ್ಟನು .
12) ಎಲ್ಲರೂ ಶ್ರೀ ಕೃಷ್ಣನನ್ನು ಕೊಂಡಾಡಿದರು.
ಯಾರೂ ಬರೆದುಕಳಿಸಿಲ್ಲ ಆದ್ದರಿಂದ, ಯಾರಿಗೂ ಬಹುಮಾನವಿಲ್ಲ . ಯಾರಾದರೂ ಸ್ವಲ್ಪ ಬರೆದು ಕಳಿಸಿದ್ದರೂ ಬಹುಮಾನ ಬರುತ್ತಿತ್ತು.
ಈ ಸಂಚಿಕೆಯ ಸ್ಪರ್ಧೆ
ಹೋಟೆಲಿನ ಟೇಬಲ್, ಛತ್ರಿ, ನೂಕುವ ದೊಡ್ಡ ಗಾಡಿ ಗಳಂತೆ ಮಾಡಿ, ಪದಬಂಧ ಕೊಟ್ಟಿದ್ದೇನೆ
ಈ ಮೇಲಿನ ಚಿತ್ರ, ಹೋಟೆಲಿನ ಟೇಬಲ್ . ನಂಬರ್ ಗಳಲ್ಲಿ ಎಷ್ಟು ಅಕ್ಷರಗಳೆಂದು ಬರೆದಿದ್ದೇನೆ
1= 7 ಅಕ್ಷರ .
2 ಮತ್ತು 3 ಎರಡರಲ್ಲೂ 8 ಅಕ್ಷರಗಳು . ಆದರೆ , 3,4,5,6 ನೇ ಅಕ್ಷರಗಳು ಒಂದೇ ಆಗಿದೆ . ಬಾಣದ ಗುರುತುಗಳು , ಯಾವ ಕಡೆಗೆ ತುಂಬಬೇಕೆಂದು ತೋರಿಸುತ್ತವೆ .
ಈ ಮೇಲಿನ ಚಿತ್ರ, ಹೋಟೆಲಿನ ಛತ್ರಿ ಆಕಾರ .
4 ಮತ್ತು 5 = 4 ಅಕ್ಷರ .
6 = 5 ಅಕ್ಷರ , 7 = 4 ಅಕ್ಷರ , 8 = 3 ಅಕ್ಷರ .
ಕಾಮನ್ ಅಕ್ಷರಗಳು ಯಾವುವೆಂದು ನಿಮಗೇ ತಿಳಿಯುತ್ತದೆ .
ಬಾಣದ ಗುರುತುಗಳು , ಯಾವ ಕಡೆಗೆ ತುಂಬಬೇಕೆಂದು ತೋರಿಸುತ್ತವೆ
ಈ ಮೇಲಿನ ಚಿತ್ರ, ಹೋಟೆಲಿನ ಕ್ಲೀನಿಂಗ್ ಟೇಬಲ್ ಆಕಾರ .
9,10,11,12 = ಎಲ್ಲವೂ 5 ಅಕ್ಷರ .
13= 11 ಅಕ್ಷರದ ದೊಡ್ಡ ಪದ
14= 5 ಅಕ್ಷರ
ಕಾಮನ್ ಅಕ್ಷರಗಳು ಯಾವುವೆಂದು ನಿಮಗೇ ತಿಳಿಯುತ್ತದೆ .
ಬಾಣದ ಗುರುತುಗಳು , ಯಾವ ಕಡೆಗೆ ತುಂಬಬೇಕೆಂದು ತೋರಿಸುತ್ತವೆ
ನೀವೇನು ಮಾಡಬೇಕಾಡುದಿಷ್ಟೆ .
ನಮ್ಮ ಕರ್ನಾಟಕ ರಾಜ್ಯದ ಊರುಗಳ ಹೆಸರು, ತಾಲ್ಲೂಕುಗಳ ಹೆಸರು ಹಳ್ಳಿಗಳ ಹೆಸರೂ, ಇವುಗಳನ್ನು , ಅಲ್ಲಿ ಕೊಟ್ಟಿರುವ ಮನೆಗಳಿಗೆ ಸರಿಹೊಂದುವಂತೆ ಬರೆಯಬೇಕು . ಎಲ್ಲವೂ ಊರು ಅಥವಾ ಹಳ್ಳಿ ಹೆಸರೇ ಇರಬೇಕೆಂದೇನೂ ಇಲ್ಲ . ಎಲ್ಲೆಲ್ಲಿ ಯಾವುದು ಬೇಕಾದರೂ ಬರೆಯಬಹುದು
ನಿಯಮಗಳು
ಒಂದು ಬಾರಿ ಬರೆದ ಹೆಸರನ್ನು ಮತ್ತೊಮ್ಮೆ ಬರೆಯುವಂತಿಲ್ಲ .
ಪಕ್ಕದ ರಾಜ್ಯದ ಸ್ಥಳಗಳ ಹೆಸರು ಬರೆಯುವಂತಿಲ್ಲ
ಕನ್ನಡದಲ್ಲಿ ಕರೆಯುವಂತೆ ಹೆಸರು ಬರೆಯಬೇಕು ಉದಾಹರಣೆಗೆ ಧಾರವಾಡ ಅದನ್ನು ಧಾರ್ವಾರ್ ಎಂದು ಇಂಗ್ಲಿಷ್ ಅಂತೆ ಬರೆಯುವಂತಿಲ್ಲ
ಅನೇಕರು ಸರಿ ಉತ್ತರ ಬರೆದು ಕಳಿಸುವ ಸಾಧ್ಯತೆ ಇರುವುದರಿಂದ ಮೊದಲು ಯಾರು ಎಲ್ಲಾ ಸರಿ ಉತ್ತರವನ್ನು ಕಳಿಸುತ್ತಾರೋ ಅಥವಾ ಅತಿ ಹೆಚ್ಚು ಸರಿಯುತ್ತರವನ್ನು ಬರೆದಿರುತ್ತಾರೆ ಅವರಿಗೆ ಬಹುಮಾನ ಬರುತ್ತದೆ
ಹಾಗೆಂದು ಆತುರ ಬೀಳದೆ ಸರಿಯಾಗಿ ಯೋಚಿಸಿ ಬರೆದು ಕಳಿಸಿ ಏಕೆಂದರೆ ಒಮ್ಮೆ ಮಾತ್ರ ಕಳಿಸಲು ಅವಕಾಶವಿರುವುದು ಎರಡನೇ ಬಾರಿ ಕಳಿಸಿದನ್ನು ಪರಿಗಣಿಸಲಾಗುವುದಿಲ್ಲ.
ನೀವು ಚಿತ್ರಗಳನ್ನು ಬರೆಯುವಂತಿಲ್ಲ. ಒಂದು ಎರಡು ಮೂರು ನಂಬರ್ಗಳನ್ನು ಹಾಕಿ ಪದಗಳನ್ನು ಬರೆದು ಕಳಿಸಿದರೆ ಸಾಕು. ಆದರೆ ಸರಿ ಹೊಂದುತ್ತದೆಯೇ ಇಲ್ಲವೆಂದು ನೋಡಲು ನೀವು ಪೆನ್ಸಿಲ್ ನಿಂದ ಸರಳವಾಗಿ ಚಿತ್ರಗಳನ್ನು ಬರೆದು ಅದರಲ್ಲಿ ಪದ ತುಂಬಿ ಪ್ರಯತ್ನಿಸಬಹುದು.ಆ ಚಿತ್ರವನ್ನು ನನಗೆ ಕಳಿಸಬೇಕಾಗಿಲ್ಲ .
ಉತ್ತರಗಳನ್ನು ಕಳಿಸಲು ಕೊನೆಯ ದಿನಾಂಕ ಅಕ್ಟೋಬರ್ 25 ನೇ ತಾರೀಕು.
ವಿಚಾರ – ಕಾಲ್ತುಳಿತ ಮತ್ತು ಅಭಿಮಾನಿಗಳು –
ವಿಡಿಯೋ – ಜಯರಾಂ ಎ ಎಸ್
ವ್ಯಕ್ತಿ ಪರಿಚಯ – ಶ್ರೀಮತಿ ಅರ್ಚನಾ ಸುಧೀರ್
ಅವರದೇ ಬರಹದಲ್ಲಿ ಓದಿ :

ಹಲೋ
ನಾನು ಅರ್ಚನಾ ಸುಧೀರ್, ಐಸಿಎಫ್ ಪ್ರಮಾಣೀಕೃತ ಯೂತ್ ಫೌಂಡೇಶನ್ ತರಬೇತುದಾರಳು ಮತ್ತು ಮಾನಸಿಕ ಫಿಟ್ನೆಸ್ ಫೆಸಿಲಿಟೇಟರ್. ನಾನು ಈಗ 3.5 ವರ್ಷಗಳಿಂದ ಲೈಫ್ ಕೋಚಿಂಗ್ ನಲ್ಲಿದ್ದೇನೆ. ನಾನು ದೇಶಾದ್ಯಂತದ ವಿವಿಧ ಶಿಕ್ಷಣ ಸಂಸ್ಥೆಗಳ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದೇನೆ.
ನಾನು 18 ರಿಂದ 24 ವರ್ಷದೊಳಗಿನ ಯುವ ವಯಸ್ಕರೊಂದಿಗೆ ಕೆಲಸ ಮಾಡುತ್ತೇನೆ. ಜೀವನ ಮತ್ತು ವೃತ್ತಿಜೀವನದಲ್ಲಿ ಸ್ಪಷ್ಟತೆಯನ್ನು ಕಂಡುಕೊಳ್ಳಲು, ಆತ್ಮವಿಶ್ವಾಸವನ್ನು ಬೆಳೆಸಲು ಮತ್ತು ಸವಾಲುಗಳನ್ನು ಸ್ಥಿತಿಸ್ಥಾಪಕತ್ವದಿಂದ ನಿಭಾಯಿಸಲು ಸಹಾಯ ಮಾಡುತ್ತೇನೆ. ನನ್ನ ಕೆಲಸವು ಪಾಸಿಟಿವ್ ಇಂಟೆಲಿಜೆನ್ಸ್® (ಪಿಕ್ಯೂ) ಅನ್ನು ಆಧರಿಸಿದೆ, ಇದು ನರವಿಜ್ಞಾನ, ಅರಿವಿನ ನಡವಳಿಕೆಯ ಮನೋವಿಜ್ಞಾನ, ಸಕಾರಾತ್ಮಕ ಮನೋವಿಜ್ಞಾನ ಮತ್ತು ಕಾರ್ಯಕ್ಷಮತೆ ವಿಜ್ಞಾನದ ಇತ್ತೀಚಿನ ಸಂಶೋಧನೆಯನ್ನು ಸಂಯೋಜಿಸುವ ವಿಜ್ಞಾನ-ಬೆಂಬಲಿತ ವಿಧಾನವಾಗಿದೆ. ಗೂಗಲ್, ಮೈಕ್ರೋಸಾಫ್ಟ್ ಮತ್ತು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಂತಹ ಸಂಸ್ಥೆಗಳು ಜನರಲ್ಲಿ ಅತ್ಯುತ್ತಮವಾದದ್ದನ್ನು ಹೊರತರಲು ಪಿಕ್ಯೂ ಅನ್ನು ಬಳಸುತ್ತಿವೆ – ಮತ್ತು ನಾನು ಅದೇ ಚೌಕಟ್ಟನ್ನು ಯುವ ವಯಸ್ಕರನ್ನು ತರುತ್ತಿದ್ದೇನೆ.

ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಕೋಚಿಂಗ್ ಗೆ ನನ್ನ ಸ್ವಂತ ಪ್ರಯಾಣ ಪ್ರಾರಂಭವಾಯಿತು. ಆ ಸಮಯದಲ್ಲಿ, ನಾನು ತರಬೇತಿ ನೀಡುವ ಶಕ್ತಿಯನ್ನು ಅನುಭವಿಸಿದೆ ಮತ್ತು ಅದು ನಾನು ಜೀವನವನ್ನು ನೋಡುವ ವಿಧಾನವನ್ನು ಬದಲಾಯಿಸಿತು. ಅದು ತರಬೇತಿ ಪಡೆಯಲು ಮತ್ತು ಐಸಿಎಫ್-ಪ್ರಮಾಣೀಕೃತ ತರಬೇತುದಾರಳಾಗಲು ನನಗೆ ಸ್ಫೂರ್ತಿ ನೀಡಿತು.
ಇದಕ್ಕೂ ಮೊದಲು, ನಾನು ತಂತ್ರಜ್ಞಾನ ಉದ್ಯಮ ಮತ್ತು ಮಾರಾಟದಲ್ಲಿ 18 ವರ್ಷಗಳನ್ನು ಕಳೆದಿದ್ದೇನೆ. ಭಾರತ, ಇಂಗ್ಲೆಂಡ್ ಮತ್ತು ಅಮೆರಿಕಾ ದೇಶಗಳಲ್ಲಿ ಕೆಲಸ ಮಾಡಿದ್ದೇನೆ. ಆ ವರ್ಷಗಳು ನನಗೆ ಹೊಂದಾಣಿಕೆ, ಸಹಾನುಭೂತಿ ಮತ್ತು ವಿವಿಧ ಸಂಸ್ಕೃತಿಗಳ ಜನರೊಂದಿಗೆ ಸಂಪರ್ಕ ಸಾಧಿಸುವ ಮೌಲ್ಯವನ್ನು ಕಲಿಸಿದವು. ಕಾಲಾನಂತರದಲ್ಲಿ, ಜನರು ಬೆಳೆಯಲು ಸಹಾಯ ಮಾಡುವುದು ನನ್ನನ್ನು ನಿಜವಾಗಿಯೂ ರೋಮಾಂಚನಗೊಳಿಸಿದೆ ಎಂದು ನಾನು ಅರಿತುಕೊಂಡೆ ಮತ್ತು ಆಗ ನಾನು ಶಿಕ್ಷಣ ಮತ್ತು ತರಬೇತಿಯತ್ತ ನನ್ನ ಗಮನವನ್ನು ಬದಲಾಯಿಸಿದೆ.
ನಾನು ಯುವ ವಯಸ್ಕರಿಗೆ ಎರಡು ಕಾರ್ಯಕ್ರಮಗಳನ್ನು ನೀಡುತ್ತೇನೆ:

-
7 ವಾರಗಳ ಪಿಕ್ಯೂ ಪ್ರೋಗ್ರಾಂ – ಇದು ಮಾನಸಿಕ ಸಾಮರ್ಥ್ಯವನ್ನು ಬೆಳೆಸಲು ಸಹಾಯ ಮಾಡುತ್ತದೆ. ಕೆಲವು ತಿಂಗಳುಗಳ ನಂತರ ಹೊಸ ಕಲಿಕೆ ಅಥವಾ ತರಬೇತಿ ಏಕೆ ಮಸುಕಾಗುತ್ತದೆ ಎಂದು ನಾವು ಆಗಾಗ್ಗೆ ಆಶ್ಚರ್ಯ ಪಡುತ್ತೇವೆ – ಏಕೆಂದರೆ ಒಳನೋಟವು ಮಾತ್ರ ನಿಜವಾದ ಕೆಲಸದ ಕೇವಲ 20% ಮಾತ್ರ. ಶಾಶ್ವತ ಬದಲಾವಣೆಯು ಮೆದುಳನ್ನು ಮರುಹೊಂದಿಸುವುದರಿಂದ ಬರುತ್ತದೆ ಮತ್ತು ಅದನ್ನೇ ಪಿಕ್ಯೂ ಕೇಂದ್ರೀಕರಿಸುತ್ತದೆ. ಏಳು ವಾರಗಳಲ್ಲಿ, ಪಿಕ್ಯೂ ಅಪ್ಲಿಕೇಶನ್ ಮತ್ತು ನನ್ನೊಂದಿಗೆ ಮಾರ್ಗದರ್ಶಿ ತರಬೇತಿಯನ್ನು ಬಳಸುವಾಗ ಸಂಬಂಧಗಳು, ಯೋಗಕ್ಷೇಮ ಮತ್ತು ಕಾರ್ಯಕ್ಷಮತೆಯನ್ನು ಹೇಗೆ ಸುಧಾರಿಸುವುದು ಎಂದು ನೀವು ಕಲಿಯುತ್ತೀರಿ.
-
ಗೆಟ್ ಮಿಕ್ಲಾರಿಟಿ (12 ವಾರಗಳು) – ಇದು ಒಂದು ಹೆಜ್ಜೆ ಆಳವಾಗಿದೆ. ಇದು ಪಿಕ್ಯೂ ಪ್ರೋಗ್ರಾಂ ಮತ್ತು ನನ್ನೊಂದಿಗೆ ಐದು ವಾರಗಳ ವೈಯಕ್ತಿಕಗೊಳಿಸಿದ ತರಬೇತಿಯನ್ನು ಒಳಗೊಂಡಿದೆ, ಅಲ್ಲಿ ನಾವು ನಿಮ್ಮ ನಿರ್ದಿಷ್ಟ ಜೀವನ ಮತ್ತು ವೃತ್ತಿಜೀವನದ ಗುರಿಗಳ ಮೇಲೆ ಕೇಂದ್ರೀಕರಿಸುತ್ತೇವೆ.
ಕೊಚ್ಚಿಯ ರಾಜಗಿರಿ ಕಾಲೇಜ್ ಆಫ್ ಬ್ಯುಸಿನೆಸ್ ಸ್ಟಡೀಸ್ ಮತ್ತು ಬೆಂಗಳೂರಿನ ಎಸ್ ಜೆಐಎಂ ನಂತಹ ಕಾಲೇಜುಗಳಲ್ಲಿ ಮಾತುಕತೆ ಮತ್ತು ಕಾರ್ಯಾಗಾರಗಳ ಮೂಲಕ ಈ ಕೆಲಸವನ್ನು ಹಂಚಿಕೊಳ್ಳುವ ಅದೃಷ್ಟ ನನ್ನದಾಗಿದೆ. ಒತ್ತಡ ಮತ್ತು ಸ್ವಯಂ-ಅನುಮಾನವನ್ನು ಸ್ಪಷ್ಟತೆ ಮತ್ತು ಆತ್ಮವಿಶ್ವಾಸವಾಗಿ ಪರಿವರ್ತಿಸಬಹುದು ಎಂದು ಅರಿತುಕೊಂಡಾಗ ಯುವ ವಯಸ್ಕರು ಹೇಗೆ ಉತ್ತಮರಾಗುತ್ತಾರೆ ಎಂಬುದನ್ನು ನಾನು ನೇರವಾಗಿ ನೋಡಿದ್ದೇನೆ.
ತರಬೇತಿಯ ಹೊರಗೆ, ನಾನು ಹಾಡುವುದು, ಹೊಸ ಸ್ಥಳಗಳನ್ನು ಅನ್ವೇಷಿಸುವುದು ಮತ್ತು ಜನರನ್ನು ಭೇಟಿಯಾಗುವುದನ್ನು ಇಷ್ಟಪಡುತ್ತೇನೆ – ಇವು ನನ್ನನ್ನು ಕುತೂಹಲ ಮತ್ತು ಸಂತೋಷದಿಂದ ಇರಿಸುವ ವಿಷಯಗಳು.
ನೀವು ನಿಮ್ಮ ಜೀವನದ ಮುಂದಿನ ಅಧ್ಯಾಯಕ್ಕೆ ಸಿದ್ಧರಾಗುತ್ತಿರುವ ಯುವ ವಯಸ್ಕರಾಗಿದ್ದರೆ, ನಿಮ್ಮ ಗುರಿಗಳತ್ತ ನೀವು ಸಾಗುತ್ತಿರುವಾಗ ನಿಮ್ಮ ಪ್ರಯಾಣದ ಭಾಗವಾಗಲು ನಾನು ಇಷ್ಟಪಡುತ್ತೇನೆ, ಗರಿಷ್ಠ ಕಾರ್ಯಕ್ಷಮತೆ, ಸಂಬಂಧಗಳು ಮತ್ತು ಯೋಗಕ್ಷೇಮದ ವಿಷಯದಲ್ಲಿ ಸಮಗ್ರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳುತ್ತೇನೆ.
ನಿಮಗೆ ಯಾರಿಗಾದರೂ ಹೆಚ್ಚಿನ ಮಾಹಿತಿ ಬೇಕಾದರೆ, ಈ ಮುಂದಿನ ಲಿಂಕ್ ಗಳಿಂದ ಸಂಪರ್ಕಿಸಿ
ನನ್ನ ಇಮೈಲ್ coach@archanasudhir.com
ನನ್ನ ವೆಬ್ಸೈಟ್ ಲಿಂಕ್
https://archanasudhir.com/
ನನ್ನ ಲಿಂಕ್ಡ್ಇನ್ ಪ್ರೊಫೈಲ್
https://www.linkedin.com/in/coacharchanasudhir/
ಇಷ್ಟೆಲ್ಲಾ ಅದ್ಬುತ ಕೆಲಸಗಳನ್ನು ಮಾಡುತ್ತಿರುವ , ನಮ್ಮ ಬಡಾವಣೆಯಲ್ಲಿ ಹುಟ್ಟಿಬೆಳೆದ , ಶ್ರೀಮತಿ ಅರ್ಚನಾ ಸುಧೀರ್ ಅವರಿಗೆ ಅಭಿನಂದನೆಗಳು.
ಸಣ್ಣ ಕಥೆ : ಉಪಕಾರ ಸ್ಮರಣೆ – ಲೇಖಕರು : ಡಾ|| ಎ ಎಸ್ ಚಂದ್ರಶೇಖರ ರಾವ್
ನನ್ನ ಹಿರಿಯ ವೈದ್ಯಮಿತ್ರರು ರಕ್ತದ ಏರೊತ್ತಡದ ಔಷಧೋಪಚಾರಕ್ಕಾಗಿ ಸುಮಾರು ಹತ್ತು ವರ್ಷಗಳಿಂದ ನನ್ನಲ್ಲಿಗೆ ಬರುತ್ತಿದ್ದರು, ತುಂಬಾ ಮೃದು ಸ್ವಭಾವದವರು. ಅವರು ಮೈಕ್ರೋ ಬಯಾಲಜಿಯ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೆಲಸ ಮಾಡಿ ಈಗ ನಿವೃತ್ತರಾಗಿ ೨೦ ವರ್ಷಗಳ ಮೇಲಾಗಿದೆ. ಒಳ್ಳೆಯ ಪ್ರಾಧ್ಯಾಪಕರೆಂದು ಹೆಸರುಗಳಿಸಿದ್ದರು. ಅಲ್ಲದೆ ಹಲವಾರು ವೈದ್ಯಕೀಯ ಲೇಖನಗಳನ್ನು ಬರೆದು ಪ್ರಕಟಿಸಿದ್ದರು. ಮತ್ತು ಕೆಲವು ಚಿಕ್ಕ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದರು. ಅವರ ಮನೆ ನಮ್ಮ ಕ್ಲಿನಿಕ್‌ನಿಂದ ೧೨ ಕಿ.ಮೀ. ಗಿಂತ ದೂರ ಇತ್ತು. ಅವರು ತಿರುಪತಿ ವೆಂಕಟೇಶ್ವರನ ಪರಮ ಭಕ್ತರು. ಆಗಾಗ್ಗೆ ತಿರುಪತಿಗೆ ಹೋಗಿ ಸೇವೆ ಸಲ್ಲಿಸಿ ಬರುತ್ತಿದ್ದರು.
ಒಂದು ಸಾರಿ ಹವಾನಿಯಂತ್ರಿತ ಬಸ್ಸಿನಲ್ಲಿ ತಿರುಪತಿಗೆ ಹೋಗಿ ಬಂದರು. ಬಸ್ಸಿನಲ್ಲಿಯ ತುಂಬ ತಣ್ಣಗಿನ ಹವಾಮಾನ ಮತ್ತು ತಿರುಪತಿಯಲ್ಲಿಯ ವಿಪರೀತ ಜನಸಂದಣಿಯಿಂದಾಗಿ ಅವರಿಗೆ ನೆಗಡಿ ಕೆಮ್ಮು ಜ್ವರ ಬಂದಿತು. ತಿರುಪತಿಯಿಂದ ನನಗಾಗಿ ಲಾಡು ಪ್ರಸಾದ ತಂದಿದ್ದರು. ತಿರುಪತಿ ಪ್ರಸಾದ ಮಾರನೆ ದಿನವೇ ನನಗೆ ತಲುಪಿಸಬೇಕಂತ ಅವರು ಮಾರನೆ ದಿನ ನನ್ನಲ್ಲಿಗೆ ಬಸ್ಸಿನಲ್ಲಿ ಬಂದರು. ಅವರ ಬಳಿ ಕಾರು ಇದ್ದರೂ ಡ್ರೈವರ್ ಇರಲಿಲ್ಲ. ಹಾಗಾಗಿ ಬಸ್ಸಿನಲ್ಲೇ ಬಂದರು. ಅವರಿಗೆ ತುಂಬ ಜ್ವರ ಇತ್ತು. ಸುಮಾರು ೮೦ ವರ್ಷ ವಯಸ್ಸಾಗಿತ್ತು. ಪ್ರಸಾದ ಕೊಡುವುದು ನಿಧಾನವಾದರೆ ಅದು ಕೆಟ್ಟುಹೋಗುತ್ತೆಂತ ಅವರು ಭಾವಿಸಿ ಜ್ವರ ಇದ್ದರೂ ಬಂದಿದ್ದರು. ನನಗೆ ಆ ವಯಸ್ಸಿನಲ್ಲಿ ಅವರು ಜ್ವರ ಇದ್ದರೂ ನರಳುತ್ತ ಬಂದದ್ದು ನೋಡಿ ತುಂಬ ಮುಜುಗರವಾಗಿತ್ತು. ಅವರಿಗೆ ವಂದನೆ ತಿಳಿಸಿ ಪರೀಕ್ಷಿಸಿ ಔಷಧಿ ಮಾತ್ರೆ ಬರೆದುಕೊಟ್ಟು ಆಟೋರಿಕ್ಷಾದಲ್ಲಿ ಅವರನ್ನು ಕಳುಹಿಸಿಕೊಟ್ಟೆ. ಈ ರೀತಿ ಅವರ ಭಾವನೆಗಳು – ಉಪಕಾರ ಸ್ಮರಣೆ ಭಾವನೆಗಳು ತುಂಬ ಆದರ್ಶವಾಗಿತ್ತು.
ಯಾರಾದರೂ ನಮಗೆ ಏನಾದರೂ ಸಹಾಯ ಮಾಡಿದರೆ ನಾವು ಅದನ್ನು ಸ್ಮರಿಸಬೇಕು. ಕೊನೆಗೆ ಉಪಕಾರ ಮಾಡಿದವರಿಗೆ ‘ಥ್ಯಾಂಕ್ಸ್ ಅಥವಾ ವಂದನೆ’ ಹೇಳಿದರೂ ಸಾಕು. ಪಾಶ್ಚಿಮಾತ್ಯ ದೇಶಗಳಲ್ಲಿ ಒಂದು ಸಣ್ಣ ಸಹಾಯ ಮಾಡಿದರೂ ‘ಥ್ಯಾಂಕ್ಸ್’ ಎಂದು ಹೇಳುತ್ತಾರೆ. ಅಂತಹ ಸೌಜನ್ಯ ನಮ್ಮಲ್ಲಿಯೂ ಬೆಳೆದರೆ ಒಳ್ಳೆಯದಲ್ಲವೆ? ಮನೆಯವರೂ ಒಂದು ಸಣ್ಣ ಕೆಲಸ ಮಾಡಿದಾಗಲೂ ‘ಥ್ಯಾಂಕ್ಸ್’ ಹೇಳಿದರೆ ಚೆನ್ನ ಅಲ್ಲವೆ? ಉಪಕಾರಸ್ಮರಣೆ ಮಾನವನ ಮೂಲಗುಣಗಳಲ್ಲಿ ಒಂದಲ್ಲವೆ?
ಪದಬಂಧ
ಕಳೆದ ಬಾರಿಯ ಉತ್ತರಗಳು


ಸರಿ ಉತ್ತರ ಬರೆದವರು :
ಶ್ರೀಮತಿ ಸುಬ್ಬಲಕ್ಷ್ಮಿ ಸೂರ್ಯನಾರಾಯಣ ರಾವ್. ಅವರಿಗೆ ಅಭಿನಂದನೆಗಳು .
ಮುಖ್ಯ ಸ್ಪರ್ಧೆಯೇ ಪದಬಂಧ ಇರುವುದರಿಂದ , ಇಲ್ಲಿನ ಪದಬಂಧವನ್ನು ಈ ಸಂಚಿಕೆಯಲ್ಲಿ ಹಾಕಲಾಗಿಲ್ಲ.
ಲೇಖನ : ಎಸ್ ಎಲ್ ಭೈರಪ್ಪ
ಅವರ ಭಾವಚಿತ್ರ ಮತ್ತು ಲೇಖನ : ಶ್ರೀ ಕೆ ವಿ ಜಯರಾಂ

ಮೇಲಿನ ಭಾವಚಿತ್ರವನ್ನು ರಚಿಸುವ ಮೂಲಕ ನಾನು ದಂತಕಥೆಗಾರ ಡಾ. ಎಸ್.ಎಲ್. ಭೈರಪ್ಪ ಅವರಿಗೆ ನನ್ನ ವಿನಮ್ರ ಗೌರವವನ್ನು ಸಲ್ಲಿಸುತ್ತಿದ್ದೇನೆ. ದುರಂತಗಳು, ಬಡತನ, ಅವರ ಚಿಕ್ಕಪ್ಪನಿಂದ ಕೆಟ್ಟ ವರ್ತನೆ ಇತ್ಯಾದಿಗಳ ಹೊರತಾಗಿಯೂ, ಅವರು ಜೀವನದಲ್ಲಿ ತಮ್ಮದೇ ಆದ ಹಾದಿಯನ್ನು ರೂಪಿಸಿಕೊಳ್ಳಲು ನಿರ್ಧರಿಸಿದರು, ಪಿಎಚ್‌ಡಿ ಸೇರಿದಂತೆ ಉನ್ನತ ಶಿಕ್ಷಣವನ್ನು ಪಡೆದರು ಮತ್ತು ಚಿಕ್ಕ ವಯಸ್ಸಿನಲ್ಲಿಯೇ ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದರು. ಅವರು ಕನ್ನಡದಲ್ಲಿ ಶ್ರೇಷ್ಠ ಬರಹಗಾರರಲ್ಲದಿರಬಹುದು, ಆದರೆ ಅವರು ಅತ್ಯಂತ ಜನಪ್ರಿಯ ಬರಹಗಾರ. ಅವರು ಗೆದ್ದ ಪ್ರಶಸ್ತಿಗಳನ್ನು ಮರೆತುಬಿಡಬಹುದು ಆದರೆ ಅವರ ಪುಸ್ತಕಗಳನ್ನು ದೀರ್ಘಕಾಲದವರೆಗೆ ಓದಲಾಗುತ್ತದೆ. ಅವರಿಗೆ ಸಣ್ಣ ಕಣ್ಣುಗಳಿದ್ದವು ಆದರೆ ಆ ಕಣ್ಣುಗಳು ಪ್ರಪಂಚದ ಮೂಲೆಗಳನ್ನು ಮತ್ತು ಬಾಹ್ಯಾಕಾಶವನ್ನು (ಯಾನ) ಭೇದಿಸುತ್ತಿದ್ದವು. ಅವರು ತಮ್ಮ ಪುಸ್ತಕಗಳನ್ನು ಬರೆಯುವ ಮೊದಲು ವ್ಯಾಪಕ ಓದು ಮತ್ತು ಸಂಶೋಧನೆ ಮಾಡಿದರು.
ಇದು ಸುಮಾರು 90 ವರ್ಷ ವಯಸ್ಸಿನ ಎಸ್.ಎಲ್. ಭೈರಪ್ಪ ಅವರ ರೇಖಾಚಿತ್ರ. ಶ್ರೀ ಕೆ ವಿ ಜಯರಾಂ ಅವರಿಂದ.

ಬೌದ್ಧಿಕವಾಗಿ ಅವರು ಎಂದಿಗೂ ವಯಸ್ಸಾಗಿರಲಿಲ್ಲ. ಅವರ ಕುಟುಂಬದಲ್ಲಿನ ದುರಂತಗಳು ಮತ್ತು ಬಡತನದ ಹೊರತಾಗಿಯೂ, ಭೈರಪ್ಪ ಅವರನ್ನು ಶ್ರೇಷ್ಠರನ್ನಾಗಿ ಮಾಡಿದ್ದು ಅವರ ಜ್ಞಾನದ ಬಾಯಾರಿಕೆ, ಓದುವ ಉತ್ಸಾಹ, ಪ್ರವೃತ್ತಿ, ಕುತೂಹಲ, ವೀಕ್ಷಣಾ ಪ್ರಜ್ಞೆ, ಪ್ರಯಾಣದ ಉತ್ಸಾಹ (ಅಮೆಜಾನ್ ಮತ್ತು ಅಂಟಾರ್ಟಿಕಾ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದಾರೆ) ಮತ್ತು ಎಲ್ಲಾ ರೀತಿಯ ಮಾನವರೊಂದಿಗೆ ಸಂವಹನ ಮತ್ತು ಅಂತಿಮವಾಗಿ ಅವರ ಪೌರಾಣಿಕ, ತಾತ್ವಿಕ ಮತ್ತು ಐತಿಹಾಸಿಕ ಜ್ಞಾನದೊಂದಿಗೆ ಅವರ ಸಾಂಸ್ಕೃತಿಕ ಮತ್ತು ಸಾಮಾಜಿಕ ಅನುಭವಗಳನ್ನು ಆಧರಿಸಿದ ಕಥೆ ಹೇಳುವಿಕೆಯಲ್ಲಿ ಅವರ ಅಸಾಧಾರಣ ಪ್ರತಿಭೆ.
ಭೈರಪ್ಪ ಅವರ ಬರವಣಿಗೆಯ ಶೈಲಿಯನ್ನು ಅವರ ಓದುಗರು ಮೆಚ್ಚಿಕೊಂಡರು ಮತ್ತು ಅವರ ಸಮಯದಲ್ಲಿ ಅವರ ಲಕ್ಷಾಂತರ ಪುಸ್ತಕಗಳು ಮಾರಾಟವಾದವು. ಅವರ ಎಲ್ಲಾ ಗಳಿಕೆ ಮತ್ತು ಸ್ವತ್ತುಗಳನ್ನು ಈಗ ಸಾರ್ವಜನಿಕ ಉದ್ದೇಶಗಳಿಗಾಗಿ, ವಿಶೇಷವಾಗಿ ಬಡ ವಿದ್ಯಾರ್ಥಿಗಳಿಗೆ, ಟ್ರಸ್ಟ್ ನಿರ್ವಹಿಸುವ ನಿಧಿಯೊಂದಿಗೆ ಬಳಸಿಕೊಳ್ಳಲಾಗುತ್ತದೆ. ಅವರ ಕುಟುಂಬ ಸದಸ್ಯರು ಟ್ರಸ್ಟ್‌ನ ಭಾಗವಾಗುವುದಿಲ್ಲ ಅಥವಾ ಅವರ ಸಂಪತ್ತಿನ ಯಾವುದೇ ಭಾಗವನ್ನು ಪಡೆಯುವುದಿಲ್ಲ.
ಅವರ ಆತ್ಮಕ್ಕೆ ಶಾಂತಿ ಸಿಗಲಿ.
ಸುದ್ದಿಗಳು
ನವರಾತ್ರಿ ಪ್ರಯುಕ್ತ ಅನೇಕರ ಮನೆಯಲ್ಲಿ ಬೊಂಬೆಗಳನ್ನು ಕೂಡಿಸಿ ಅಲಂಕಾರ ಮಾಡಿದ್ದರು.

ಇದು ನಮ್ಮ ನೆಂಟರಾದ ಡಾ || ಶ್ರೀರಾಮ ಅವರ ಮನೆಯಲ್ಲಿನ ದೃಶ್ಯ

ನಮ್ಮ ಬಡಾವಣೆಯ ಪ್ರೊಫೆಸರ್ ಗಂಗಾಧರ್ ಅವರಿಗೆ ಸನ್ಮಾನ ನಡೆಯಿತು . ಪ್ರೊಫೆಸರ್ ಗಂಗಾಧರ್ ಅವರು ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಲಾಸ್ಪುರ ಮತ್ತು ದಿಯೋಘರ್) ಯ ಪ್ರಧಾನ ಕಾರ್ಯದರ್ಶಿ, ಭಾರತೀಯ ವಿಜ್ಞಾನ ಕಾಂಗ್ರೆಸ್ ಸಂಘದ ಮಂಡಳಿ ಸದಸ್ಯರೂ. ಪ್ರೊಫೆಸರ್ ಗಂಗಾಧರ್ ಅವರಿಗೆ ಅಭಿನಂದನೆಗಳು.
ಧನ್ಯವಾದಗಳು





0 Comments